ಸ್ಪೇನ್ ಮಾಸ್ಟರ್ಸ್ ಟೂರ್ನಿಯಲ್ಲಿ ತಾರಾ ಆಟಗಾರ್ತಿ ಪಿ.ವಿ.ಸಿಂಧು ಸೆಮಿಫೈನಲ್ ತಲುಪಿದ್ದಾರೆ. ಆದರೆ ಶ್ರೀಕಾಂತ್ ಸೋತು ಟೂರ್ನಿಯಿಂದ ಹೊರಬಿದಿದ್ದಾರೆ. ಸಿಂಧು ಟೂರ್ನಿಯಲ್ಲಿ ಉಳಿದುಕೊಂಡಿರುವ ಏಕೈಕ ಭಾರತೀಯ ಆಟಗಾರ್ತಿಯಾಗಿದ್ದಾರೆ.
ಎರಡು ಬಾರಿ ಒಲಿಂಪಿಕ್ ಚಾಂಪಿಯನ್ ಸಿಂಧೂ ವಿಶ್ವದ 19ನೇ ರಾಂಕ್ ಆಟಗಾರ್ತಿ ಡೆನ್ಮಾರ್ಕ್ನ ಬ್ಲಿಚ್ಫೆಲ್ಡ್ತ್ ವಿರುದ್ಧ 21-14, 21-17 ಅಂಕಗಳಿಂದ ಗೆದ್ದು ಉಪಾಂತ್ಯ ತಲುಪಿದರು. ಸೆಮಿಯಲ್ಲಿ ಸಿಂಗಾಪುರದ ಯೊ ಜಿಯೊ ಮಿನ್ ವಿರುದ್ಧ ಸೆಣಸಲಿದ್ದಾರೆ.
ಪುರುಷರ ಸಿಂಗಲ್ಸ್ನ ಕ್ವಾರ್ಟರ್ನಲ್ಲಿ ಶ್ರೀಕಾಂತ್ ಜಪಾನ್ನ ಕೆಂಟಾ ನಿಶಿಮೊಟೊ ವಿರುದ್ಧ 18-21, 15-21 ಅಂಕಗಳಿಂದ ಸೋತು ಹೊರಬಿದ್ದರು.
ಟೂರ್ನಿಯಲ್ಲಿ ಎರಡನೆ ಶ್ರೇಯಾಂಕಿತ ಆಟಗಾರ್ತಿಯಾಗಿರುವ ಸಿಂಧು ಗಾಯದ ಸಮಸ್ಯೆ ನಂತರವೂ ಸ್ಥಿರ ಪ್ರದರ್ಶನ ನೀಡಲು ಪರದಾಡಿದರು. ಮೊದಲ ಸುತ್ತಿನಲ್ಲಿ ಗೆದ್ದ ನಂತರ ಎರಡನೆ ಸುತ್ತಿನಲ್ಲೂ ಪ್ರಾಬಲ್ಯ ಮೆರೆದರು.