ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳಟಿ20 ಸರಣಿಗೆ ಅಭ್ಯಾಸ ಶುರುವಾಗಿದೆ. ಟೀಮ್ ಇಂಡಿಯಾ ತವರಿನಲ್ಲಿ ಸರಣಿ ಗೆಲ್ಲುವ ಪ್ಲಾನ್ ಮಾಡಿಕೊಂಡಿದೆ. ದಕ್ಷಿಣ ಆಫ್ರಿಕಾ ಇಲ್ಲಿ ತನಕ ಟೀಮ್ ಇಂಡಿಯಾ ವಿರುದ್ಧ ಟಿ20 ಕ್ರಿಕೆಟ್ನಲ್ಲಿ ಸರಣಿ ಸೋತಿಲ್ಲ. ಅದನ್ನು ಮುಂದುವರಸಿಕೊಂಡು ಹೋಗುವ ಪ್ಲಾನ್ ಮಾಡುತ್ತಿದೆ. ಭಾರತ ತವರಿನಲ್ಲಿ ಸರಣಿ ಗೆಲುವಿನ ದಾಖಲೆ ಮುಂದುವರೆಸುವ ತವಕದಲ್ಲಿದೆ.
ಟೀಂ ಇಂಡಿಯಾದ ಇಬ್ಬರು ಸ್ಟಾರ್ ಸ್ಪಿನ್ನರ್ಸ್ ಮ್ಯಾಚ್ ವಿನ್ನರ್ಗಳು. ದಕ್ಷಿಣ ಆಫ್ರಿಕಾ ಈ ಇಬ್ಬರ ಕಡೆಗೆ ಹೆಚ್ಚು ಗಮನ ಕೊಟ್ಟಿದೆ. ಯಜುವೇಂದ್ರ ಚಹಲ್ ಮತ್ತು ಕುಲ್ ದೀಪ್ ಯಾದವ್ ವಿರುದ್ಧ ಸರಿಯಾಗಿ ಆಡಿದರೆ ಸರಣಿ ನಮ್ಮದೇ ಅಂತ ದಕ್ಷಿಣ ಆಫ್ರಿಕಾ ಯೋಚನೆ ಮಾಡಿದೆ. ಯುಜವೇಂದ್ರ ಚಹಲ್ ಹಾಗೂ ಕುಲ್ದೀಪ್ ಯಾದವ್ ಸ್ಪಿನ್ ಮ್ಯಾಜಿಕ್ಗೆ ಫುಲ್ ಸ್ಟಾಪ್ ಹಾಕಲು ಭಾರೀ ರಣತಂತ್ರ ರೂಪಿಸಿದೆ.
ಈ ಕುಲ್ಚಾ ಜೋಡಿ ಜೊತೆಯಾಗಿ ಟೀಂ ಇಂಡಿಯಾಗೆ ಅನೇಕ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದೆ. ಐಪಿಎಲ್ ನಲ್ಲಿ ಇಬ್ಬರೂ ದಮ್ದಾರ್ ಪ್ರದರ್ಶನ ನೀಡಿದ್ರು. ಇಬ್ಬರೂ ಸೇರಿ ಒಟ್ಟು 48 ವಿಕೆಟ್ ಪಡೆದಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಚಹಲ್ 27 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಧರಿಸಿದ್ರೆ, ಕುಲ್ದೀಪ್ ಯಾದವ್ 21 ಕಬಳಿಸಿ ಮಿಂಚಿದ್ರು. ಇಬ್ಬರ ಈ ಸಾಲಿಡ್ ಪ್ರದರ್ಶನವೇ ಆಫ್ರಿಕನ್ನರಿಗೆ ನಡುಕ ಹುಟ್ಟಿಸಿದೆ.