ಕ್ರೈಸ್ಟ್ಚರ್ಚ್ ಟೆಸ್ಟ್ನ 4ನೇ ದಿನ ದಕ್ಷಿಣ ಆಫ್ರಿಕಾ ಗೆಲುವಿನ ಕನಸು ಕಾಣುತ್ತಿತ್ತು. 5ನೇ ದಿನ ಆಟ ಆರಂಭಿಸಿದ ಡೆವೊನ್ ಕಾನ್ವೆ ಮತ್ತು ಟಾಮ್ ಬ್ಲಂಡಲ್ ದಕ್ಷಿಣ ಆಫ್ರಿಕಾವನ್ನು ಸಾಕಷ್ಟು ಕಾಡಿದರು. 92 ರನ್ಗಳಿಸಿದ್ದ ಕಾನ್ವೆ ಸಿಪಮ್ಲ ಎಸೆತದಲ್ಲಿ ಎಲ್ಬಿ ಬಲೆಗೆ ಬೀಳುವುದರೊಂದಿಗೆ ಪತನ ಆರಂಭವಾಯಿತು. ದಾಳಿಗಿಳಿದ ಜನ್ಸೆನ್ 44 ರನ್ಗಳಿಸಿದ್ದ ಬ್ಲಂಡಲ್ ವಿಕೆಟ್ ಹಾರಿಸಿದರು. ಇದರ ಬೆನ್ನಲ್ಲೇ ಜನ್ಸೆನ್ ಅಪಾಯಕಾರಿ ಕಾಲಿನ್ ಡಿ ಗ್ರಾಂಡ್ ಹೋಂ ಆಟವನ್ನು 18 ರನ್ಗೆ ಕೊನೆಗೊಳಿಸಿದರು.
ಕೈಲ್ ಜೇಮಿಸನ್ ಕೂಡ ಜನ್ಸೆನ್ ಮಾರಕ ದಾಳಿಗೆ ಬಲಿಯಾದರು. ಟಿಮ್ ಸೌಥಿ ಆಟವೂ 17 ರನ್ಗಳಿಗೆ ಅಂತ್ಯಕಂಡಿತು. ಮ್ಯಾಟ್ ಹೆನ್ರಿ ಮಹಾರಾಜಾ ಎಸೆತದಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬೀಳುವುದರೊಂದಿಗೆ ನ್ಯೂಜಿಲೆಂಡ್ನ 2ನೇ ಇನ್ನಿಂಗ್ಸ್ 227 ರನ್ಗಳಿಗೆ ಅಂತ್ಯ ಕಂಡಿತು. ದಕ್ಷಿಣ ಆಫ್ರಿಕಾ ಬೌಲಿಂಗ್ನಲ್ಲಿ ರಬಾಡಾ, ಜನ್ಸೆನ್ ಮತ್ತು ಮಹಾರಾಜಾ ತಲಾ 3 ವಿಕೆಟ್ ಪಡೆದರು.
198 ರನ್ಗಳ ಭರ್ಜರಿ ಜಯ ದಾಖಲಿಸಿದ ದಕ್ಷಿಣ ಆಫ್ರಿಕಾ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-1ರ ಸರಣಿ ಸಮಬಲ ಸಾಧಿಸಿತು.