South Africa T20 league ಸೌತ್ ಆಫ್ರಿಕಾ ಕ್ರಿಕೆಟ್ ಲೀಗ್ ಗೂ ಐಪಿಎಲ್ ಫ್ರಾಂಚೈಸಿಗಳೇ ಯಜಮಾನರು..!

ಇದು ಹರಿಣಗಳ ನಾಡಿನ ಪ್ರತಿಷ್ಠಿತ ಟಿ-20 ಕ್ರಿಕೆಟ್ ಲೀಗ್. ಹೆಸರಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಲೀಗ್. ಆದ್ರೆ ಅಲ್ಲಿ ನಡೆಯುವುದು ಇಂಡಿಯನ್ ಪ್ರೀಮಿಯರ್ ಲೀಗ್ ಪಾರ್ಟ್ -2.
ಎಲ್ಲರಿಗೂ ಗೊತ್ತಿರುವ ಹಾಗೇ ಇಂಡಿಯನ್ ಪ್ರೀಮಿಯರ್ ಲೀಗ್ ಕಳೆದ 15 ವರ್ಷಗಳಲ್ಲಿ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದೆ. ಬಿಸಿಸಿಐ ಬೊಕ್ಕಸಕ್ಕೆ ಸುನಾಮಿಯಂತೆ ದುಡ್ಡು ಹರಿದು ಬರುತ್ತಿದೆ. ಇದನ್ನು ಗಮನಿಸಿರುವ ಹಲವು ಕ್ರಿಕೆಟ್ ರಾಷ್ಟ್ರಗಳು ಕೂಡ ಐಪಿಎಲ್ ನಂತೆ ಟಿ-20 ಲೀಗ್ ಟೂರ್ನಿಗಳನ್ನು ಆಯೋಜನೆ ಮಾಡುತ್ತಿವೆ. ಆದ್ರೆ ಐಪಿಎಲ್ ನಷ್ಟು ಫೇಮಸ್ ಯಾವ ಟೂರ್ನಿ ನಡೆದಿಲ್ಲ. ಅದು ನಡೆಯುವುದು ಕೂಡ ದೂರದ ಮಾತು.
ಇದೀಗ ಮುಂಬರುವ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಲೀಗ್ ಅನ್ನು ಆರಂಭಿಸಲು ಕ್ರಿಕೆಟ್ ಸೌತ್ ಅಫ್ರಿಕಾ ಎಲ್ಲಾ ತಯಾರಿಗಳನ್ನು ನಡೆಸಿಕೊಂಡಿವೆ.
ಈಗಾಗಲೇ ಸೌತ್ ಆಫ್ರಿಕಾ ಕ್ರಿಕೆಟ್ ಲೀಗ್ ನ ಕಮೀಷನರ್ ಆಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ನೇಮಕಗೊಂಡಿದ್ದಾರೆ.
ಇನ್ನೊಂದು ವಿಶೇಷ ಅಂದ್ರೆ ಸೌತ್ ಆಫ್ರಿಕಾ ಕ್ರಿಕೆಟ್ ಲೀಗ್ ನಲ್ಲಿ ಭಾಗವಹಿಸುವ ಆರು ಫ್ರಾಂಚೈಸಿಯ ಮಾಲೀಕರು ಕೂಡ ಭಾರತೀಯರೇ. ಅದು ಕೂಡ ಐಪಿಎಲ್ ಫ್ರಾಂಚೈಸಿಯನ್ನು ಹೊಂದಿರುವ ಮಾಲೀಕರು ಸೌತ್ ಆಫ್ರಿಕಾ ಕ್ರಿಕೆಟ್ ಲೀಗ್ ಫ್ರಾಂಚೈಸಿಗಳ ಯಜಮಾನರಾಗಿದ್ದಾರೆ.

ಸೌತ್ ಆಫ್ರಿಕಾ ಕ್ರಿಕೆಟ್ ಲೀಗ್ ಗೂ ಐಪಿಎಲ್ ಫ್ರಾಂಚೈಸಿಗಳೇ ಯಜಮಾನರು..!
ನ್ಯೂಲ್ಯಾಂಡ್ಸ್ ಮೈದಾನ – ಕೇಪ್ ಟೌನ್ ನಗರ ಪ್ರತಿನಿಧಿಸುವ ತಂಡವನ್ನು ರಿಲ್ಯಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಪಾಲಾಗಿದೆ. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪ್ರಾಂಚೈಸಿ
ಕಿಂಗ್ಸ್ ಮೀಡ್ ಮೈದಾನ – ಡರ್ಬಾನ್ ನಗರ ಪ್ರತಿನಿಧಿಸುವ ಫ್ರಾಂಚೈಸಿ ಆರ್ ಪಿಎಸ್ ಜಿ ಸ್ಪೋಟ್ಸ್ ಲಿಮಿಟೆಡ್ ಕೈ ವಶವಾಗಿದೆ. ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ
ಪೋರ್ಟ್ ಎಲಿಝಬೇತ್ ಮೈದಾನ – ಗ್ವೆಬೆರಾಹ್ ನಗರ ಪ್ರತಿನಿಧಿಸುವ ಫ್ರಾಂಚೈಸಿ ಸನ್ ಟಿವಿ ನೆಟ್ ವರ್ಕ್ ಖರೀದಿ ಮಾಡಿದೆ. ಐಪಿಎಲ್ ನಲ್ಲಿ ಸನ್ ರೈಸಸ್ ಹೈದ್ರಬಾದ್ ಫ್ರಾಂಚೈಸಿ
ವಾಂಡರೆರ್ಸ್ ಮೈದಾನ -ಜೋಹಾನ್ಸ್ ಬರ್ಗ್ ನಗರ ಪ್ರತಿನಿಧಿಸುವ ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ ಪ್ರೈವೆಟ್ ಲಿಮಿಟೆಡ್ ಪಾಲಾಗಿದೆ. ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ
ಬಲಾಂಡ್ ಪಾರ್ಕ್ ಮೈದಾನ – ಪರ್ಲ್ ನಗರ ಪ್ರತಿನಿಧಿಸುವ ಫ್ರಾಂಚೆಸಿ ರಾಯಲ್ ಸ್ಪೋಟ್ರ್ಸ್ ಗ್ರೂಪ್ ಖರೀದಿ ಮಾಡಿದೆ. ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ಫ್ರಾಂಚೈಸಿ

ಸೂಪರ್ ಸ್ಪೋರ್ಟ್ ಮೈದಾನ – ಪ್ರಿಟೊರಿಯಾ ನಗರ ಪ್ರತಿನಿಧಿಸುವ ಫ್ರಾಂಚೈಸಿ ಜೆ ಎಸ್ ಡಬ್ಲ್ಯು ಸ್ಪೋಟ್ರ್ಸ್ ಖರೀದಿ ಮಾಡಿದೆ. ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ ಮಾಲೀಕರು.
ಟೂರ್ನಿಯಲ್ಲಿ ವಿಶ್ವದ ಶ್ರೇಷ್ಠ ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ಟೂರ್ನಿಯು ಜನವರಿ ಮತ್ತು ಫೆಬ್ರವರಿಯಲ್ಲಿ ನಡೆಯಲಿದೆ. ಟಿ-20 ಲೀಗ್ ಟೂರ್ನಿಗಾಗಿಯೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯಿಂದ ಹಿಂದೆ ಸರಿಯುವ ನಿರ್ಧಾರವನ್ನು ತೆಗೆದುಕೊಂಡಿದೆ.
ಒಟ್ಟಿನಲ್ಲಿ ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ವಿದೇಶಿ ನೆಲಕ್ಕೂ ಕಾಲಿಡುತ್ತಿದ್ದಾರೆ. ಆದ್ರೆ ಕ್ರಿಕೆಟ್ ಜಗತ್ತು ಈ ಬೆಳವಣಿಗೆಯಿಂದ ಆತಂಕಕ್ಕಿಡಾಗಿದೆ. ಪ್ರತಿ ರಾಷ್ಟ್ರಗಳು ಟಿ-20 ಕ್ರಿಕೆಟ್ ಲೀಗ್‍ಗಳನ್ನು ಸಂಘಟಿಸುತ್ತಾ ಬಂದ್ರೆ ಮುಂದಿನ ದಿನಗಳಲ್ಲಿ ದ್ವಿ ಪಕ್ಷೀಯ ಸರಣಿ, ಟೆಸ್ಟ್ ಹಾಗೂ ಏಕದಿನ ಪಂದ್ಯಗಳ ಗತಿ ಏನು ಎಂಬುದು ಪ್ರಮುಖ ಪ್ರಶ್ನೆಯಾಗಿ ಕಾಡುತ್ತಿದೆ.