ಏಕದಿನ ಸರಣಿಯಿಂದ ಹೊರಗುಳಿದ ಕಾಗಿಸೊ ರಬಾಡ
ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಯಿಂದ ದಕ್ಷಿಣ ಆಫ್ರಿಕಾದ ವೇಗಿ ಕಾಗಿಸೊ ರಬಾಡ ಹೊರಗುಳಿದಿದ್ದಾರೆ.
ದಕ್ಷಿಣ ಆಫ್ರಿಕಾ ವೇಗಿ ಕಾಗಿಸೊ ರಬಾಡ ಅವರಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ವಿಶ್ರಾಂತಿ ನೀಡಿದೆ. ಓವರ್ ವರ್ಕ್ ಲೋಡ್ ಕಾರಣ ನೀಡಿ ರಬಾಡ ಅವರನ್ನು ಏಕದಿನ ಸರಣಿಯಿಂದ ಹೊರಗಿಡಲಾಗಿದೆ.
ಮುಂದಿನ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ರೆಡಿಯಾಗುವ ಉದ್ದೇಶದಿಂದ ರಬಾಡ ಅವರನ್ನು ಏಕದಿನ ಸರಣಿಯಿಂದ ಹೊರಗಿಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಆದ್ರೆ ಕಾಗಿಸೊ ರಬಾಡ ಅವರ ಜಾಗಕ್ಕೆ ಯಾರನ್ನು ಕೂಡ ಸೇರ್ಪಡೆಗೊಳಿಸಲಾಗಿಲ್ಲ.
ಕಾಗಿಸೊ ರಬಾಡ ಅವರು ದಕ್ಷಿಣ ಆಫ್ರಿಕಾ ಪರ 50 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 233 ವಿಕೆಟ್ ಗಳನ್ನು ಉರುಳಿಸಿದ್ದಾರೆ. ಹಾಗೇ 82 ಏಕದಿನ ಪಂದ್ಯಗಳಲ್ಲಿ 126 ವಿಕೆಟ್ ಹಾಗೂ 40 ಟಿ-20 ಪಂದ್ಯಗಳಲ್ಲಿ 49 ವಿಕೆಟ್ ಗಳನ್ನು ಕಬಳಿಸಿದ್ದಾರೆ.
ಈಗಾಗಲೇ ಟೆಸ್ಟ್ ಸರಣಿಯನ್ನು ಸೋತಿರುವ ಟೀಮ್ ಇಂಡಿಯಾ ಏಕದಿನ ಸರಣಿಯನ್ನು ಗೆಲ್ಲುವ ತವಕದಲ್ಲಿದೆ. ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಕೆ.ಎಲ್. ರಾಹುಲ್ ಅವರು ಮುನ್ನಡೆಸಲಿದ್ದಾರೆ. ಮೊದಲ ಏಕದಿನ ಪಂದ್ಯ ಜನವರಿ 19ರಂದು ಪರ್ಲ್ ನಲ್ಲಿ ನಡೆಯಲಿದೆ.