ಕ್ರೈಸ್ಟ್ ಚರ್ಚ್ ಟೆಸ್ಟ್ನಲ್ಲಿ ದಕ್ಷಿಣ ಆಫ್ರಿಕಾ ಮೊದಲ ದಿನವೇ ಮೇಲುಗೈ ಸಾಧಿಸಿದೆ. ಮೊದಲ ಟೆಸ್ಟ್ನಲ್ಲಿ ಹೀನಾಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ದಕ್ಷಿಣ ಆಫ್ರಿಕಾ 2ನೇ ಟೆಸ್ಟ್ನ ಮೊದಲ ದಿನವೇ ಮಿಂಚಿನ ಆಟ ಆಡಿದೆ. ಮೊದಲ ದಿನ ಕೇವಲ 3 ವಿಕೆಟ್ ಕಳೆದುಕೊಂಡು 238 ರನ್ಗಳಿಸಿದೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾಕ್ಕೆ ಡೀನ್ ಎಲ್ಗರ್ ಮತ್ತು ಸರೆಲ್ ಇರ್ವಿ ಉತ್ತಮ ಆರಂಭ ತಂದುಕೊಟ್ಟರು. ಮೊದಲ ವಿಕೆಟ್ಗೆ ಈ ಜೋಡಿ 111 ರನ್ಗಳನ್ನು ಸೇರಿಸಿತು. ಎಲ್ಗರ್ 41 ರನ್ಗಳಿಸಿ ಔಟಾದರು.
ಇರ್ವಿ ಮತ್ತು ಮಾರ್ಕ್ ರಾಂ ನಡುವೆ 88 ರನ್ಗಳ ಜೊತೆಯಾಟ ಬಂತು. ಈ ನಡುವೆ ಇರ್ವಿ 2ನೇ ಟೆಸ್ಟ್ನಲ್ಲೇ ಚೊಚ್ಚಲ ಶತಕದ ಸಂಭ್ರಮ ಆಚರಿಸಿಕೊಂಡರು. ಮಾರ್ಕ್ ರಾಂ 42 ರನ್ಗಳಸಿ ವಾಗ್ನರ್ಗೆ ವಿಕೆಟ್ ಒಪ್ಪಿಸಿದರೆ, ಇರ್ವಿ 108 ರನ್ಗಳಿಸಿ ಹೆನ್ರಿಗೆ ವಿಕೆಟ್ ಒಪ್ಪಿಸಿದರು.
ದಿನದ ಕೊನೆಯಲ್ಲಿ ರಾಸಿ ವಾಂಡರ್ ಡ್ಯುಸನ್ ಮತ್ತು ತೆಂಬ ಬವುಮಾ ಹೆಚ್ಚು ಆಘಾತವಾಗದಂತೆ ನೋಡಿಕೊಂಡರು. ದಕ್ಷಿಣ ಆಫ್ರಿಕಾ ಮೊದಲ ದಿನ 3 ವಿಕೆಟ್ ಕಳೆದುಕೊಂಡು 238 ರನ್ಗಳಿಸಿದೆ. ವಾಂಡರ್ ಡ್ಯುಸನ್ 13 ಹಾಗೂ ಬವುಮಾ 22 ರನ್ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.