ಟೀಮ್ ಇಂಡಿಯಾ ವಿರುದ್ಧ ಟಾಸ್ ಗೆದ್ದ ಹರಿಣಗಳು ಮೊದಲು ಬ್ಯಾಟಿಂಗ್ ಆಯ್ಕೆ – ಚೊಚ್ಚಲ ಏಕದಿನ ಪಂದ್ಯಕ್ಕೆ ವೆಂಕಟೇಶ್ ಅಯ್ಯರ್ ಪದಾರ್ಪಣೆ
ಟೀಮ್ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಮೊದಲ ಬಾರಿ ನಾಯಕನಾಗಿ ಕೆ.ಎಲ್. ರಾಹುಲ್ ಅವರು ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಟೀಮ್ ಇಂಡಿಯಾದಲ್ಲಿ ವೆಂಕಟೇಶ್ ಅಯ್ಯರ್ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಲಿದ್ದಾರೆ. ಇನ್ನುಳಿದಂತೆ ಟೀಮ್ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಇಲ್ಲ. ಬೌಲಿಂಗ್ ನಲ್ಲಿ ಉಪನಾಯಕ ಜಸ್ಪ್ರಿತ್ ಬೂಮ್ರಾ ಜೊತೆ ಭುವನೇಶ್ವರ್ ಕುಮಾರ್, ಶಾರ್ದೂಲ್ ಥಾಕೂರ್ ವೇಗದ ಬೌಲಿಂಗ್ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ಆರ್. ಅಶ್ವಿನ್, ಯುಜುವೇಂದ್ರ ಚಾಹಲ್ ಸ್ಪಿನ್ ವಿಭಾಗದ ಬತ್ತಳಿಕೆಗಳಾಗಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಶ್ರೇಯಾಸ್ ಅಯ್ಯರ್ ಕಣಕ್ಕಿಳಿಯಲಿದ್ದಾರೆ. ರಿಷಬ್ ಪಂತ್ ಐದನೇ ಕ್ರಮಾಂಕ ಹಾಗೂ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಶಿಖರ್ ಧವನ್ ಜೊತೆ ನಾಯಕ ಕೆ.ಎಲ್. ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದಲ್ಲಿ ಕಾಗಿಸೊ ರಬಾಡ ಬದಲು ಮಾರ್ಕೊ ಜಾನ್ಸೆನ್ ಅವರು ಸ್ಥಾನ ಪಡೆದುಕೊಂಡಿದ್ದಾರೆ.
ಟೀಮ್ ಇಂಡಿಯಾ ಹನ್ನೊಂದರ ಬಳಗ
ಕೆ.ಎಲ್. ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ವೆಂಕಟೇಶ್ ಅಯ್ಯರ್, ಶಾರ್ದೂಲ್ ಥಾಕೂರ್, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್, ಜಸ್ಪ್ರಿತ್ ಬೂಮ್ರಾ (ಉಪನಾಯಕ), ಯುಜುವೇಂದ್ರ ಚಾಹಲ್
ದಕ್ಷಿಣ ಆಫ್ರಿಕಾ ಹನ್ನೊಂದರ ಬಳಗ
ಕ್ವಿಂಟನ್ ಡಿಕಾಕ್, ಜಾನೆಮನ್ ಮಲಾನ್, ಆಡಿನ್ ಮಾರ್ಕಾಮ್, ರಸೈ ವಾನ್ ಡೇರ್ ಡುಸೇನ್, ಟೆಂಬಾ ಬಾವುಮಾ (ನಾಯಕ), ಡೇವಿಡ್ ಮಿಲ್ಲರ್, ಆಂಡಿಲ್ ಫೆಲುಕ್ವಾವೋ, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಟಾಬ್ರಾಝ್ ಶಂಶಿ, ಲುಂಗಿ ಎನ್‍ಗಿಡಿ.