Team india – ಆ.. ರಾತ್ರಿ ಆಗಿದ್ದೇನು..? ದೇವ್ರನ್ನು ನೋಡಿ ದಾದಾ ಹೆದರಿದ್ದು ಯಾಕೆ ?
ಸಚಿನ್ ತೆಂಡುಲ್ಕರ್ ಮತ್ತು ಸೌರವ್ ಗಂಗೂಲಿ ಒಳ್ಳೆಯ ಸ್ನೇಹಿತರು. 1980ರಿಂದ ಜ್ಯೂನಿಯರ್ ಕ್ರಿಕೆಟ್ ಕ್ಯಾಂಪ್ ನಿಂದಲೇ ಪರಿಚಿತರು. ಸಚಿನ್ ತೆಂಡುಲ್ಕರ್ 1989ರಲ್ಲಿ ಭಾರತ ತಂಡವನ್ನು ಸೇರಿಕೊಂಡ್ರು. ಸೌರವ್ ಗಂಗೂಲಿ 1992ರಲ್ಲಿ ತಂಡ ಸೇರಿಕೊಂಡ್ರೂ ಮತ್ತೆ ಹೊರಗುಳಿದಿದ್ದರು.
ಆದ್ರೆ 1996ರಿಂದ ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡುಲ್ಕರ್ ಸುಮಾರು 16 ವರ್ಷಗಳ ಕಾಲ ಜೊತೆಯಾಗಿ ಕ್ರಿಕೆಟ್ ಆಡಿದ್ದಾರೆ.
ಟೀಮ್ ಇಂಡಿಯಾದ ಆರಂಭಿಕರಾಗಿ ಹಲವು ರೋಚಕ ಇನಿಂಗ್ಸ್ ಗಳನ್ನು ಆಡಿದ್ದಾರೆ. ಮೈದಾನದಲ್ಲಿ ಮತ್ತು ಮೈದಾನದ ಹೊರಗಡೆ ಇಬ್ಬರ ನಡುವೆ ಕೂಡ ಉತ್ತಮವಾದ ಗೆಳೆತನವಿತ್ತು. ಹಾಗೇ ನೋಡಿದ್ರೆ ಸೌರವ್ ಗಂಗೂಲಿ ಟೀಮ್ ಇಂಡಿಯಾದ ನಾಯಕನಾಗುವುದಕ್ಕೆ ಪರೋಕ್ಷವಾಗಿ ಸಚಿನ್ ತೆಂಡುಲ್ಕರ್ ಕೂಡ ಕಾರಣರಾಗಿದ್ದರು.
ಇದೀಗ ಸೌರವ್ ಗಂಗೂಲಿ ಅವರು ಸಚಿನ್ ತೆಂಡುಲ್ಕರ್ ಅವರ ವರ್ತನೆಯನ್ನು ನೋಡಿ ಹೆದರಿದ್ದರಂತೆ. ಈ ವಿಚಾರವನ್ನು ಸೌರವ್ ಗಂಗೂಲಿ 2018ರಲ್ಲಿ ಬಹಿರಂಗಪಡಿಸಿದ್ದರು. ತಾನು ಯಾಕೆ ಹೆದರಿಕೊಂಡಿದ್ದೆ ಮತ್ತು ಆ ರಾತ್ರಿ ಏನು ನಡೆಯಿತ್ತು ಎಂಬುದನ್ನು ಹೇಳಿಕೊಂಡಿದ್ರು.
ಅದು ಇಂಗ್ಲೆಂಡ್ ಪ್ರವಾಸ. ಆಗ ಹೊಟೇಲ್ ರೂಮ್ ನಲ್ಲಿ ಟೀಮ್ ಇಂಡಿಯಾ ಆಟಗಾರರು ಇಬ್ಬರು ಇರುತ್ತಿದ್ದರು. ಈಗ ಪ್ರತಿ ಆಟಗಾರರಿಗೂ ಪ್ರತ್ಯೇಕ ಕೊಠಡಿಗಳು ಇವೆ. ನಾನು ಮತ್ತು ಸಚಿನ್ ಒಂದೇ ರೂಮ್ ನಲ್ಲಿದ್ದೇವು. ರಾತ್ರಿ ಸುಮಾರು 1ಗಂಟೆ 30 ನಿಮಿಷ. ಸಚಿನ್ ತೆಂಡುಲ್ಕರ್ ರಾತ್ರಿ ಎದ್ದು ನಡೆಯುತ್ತಿದ್ದರು. ನಾನು ಬಾತ್ ರೂಮ್ ಗೆ ಹೋಗುತ್ತಿದ್ದಾರೆ ಅಂತ ಅಂದುಕೊಂಡು ಸುಮ್ಮನಾದೆ. ಮರುದಿನ ಈ ಬಗ್ಗೆ ಏನು ಕೇಳಲಿಲ್ಲ. ಹಾಗೇ ಮರುದಿನ ರಾತ್ರಿ ಕೂಡ ಅದೇ ರೀತಿ ರೂಮ್ ನಲ್ಲಿ ನಡೆಯುತ್ತಿದ್ದರು. ರೂಮ್ ಗೆ ಒಂದು ಸುತ್ತು ಹೊಡೆದು ಕುರ್ಚಿಯಲ್ಲಿ ಕುಳಿತುಕೊಂಡು ಮತ್ತೆ ಪಕ್ಕದಲ್ಲಿ ಬಂದು ಮಲಗುತ್ತಿದ್ದರು. ಇದರಿಂದ ನಾನು ಹೆದರಿಕೊಂಡೆ. ಮರುದಿನ ಕೇಳಿದ್ದೆ. ರಾತ್ರಿ ನೀವು ಏನು ಮಾಡುತ್ತೀದ್ದೀರಿ ಎಂದು. ಆಗ ಸಚಿನ್, ನನಗೆ ರಾತ್ರಿ ನಿದ್ದೆಯಲ್ಲಿ ನಡೆದಾಡುವ ಅಭ್ಯಾಸವಿದೆ ಎಂದು ಹೇಳಿದ್ರು ಎಂದು ಸೌರವ್ ಗಂಗೂಲಿ ಆ ಘಟನೆಯನ್ನು ನೆನಪು ಮಾಡಿಕೊಂಡಿದ್ದರು. Sourav Ganguly revealed Sachin Tendulkar’s habit that scared him during England tour
ಸಚಿನ್ ಮತ್ತು ಸೌರವ್ ಗಂಗೂಲಿ ಟೀಮ್ ಇಂಡಿಯಾದ ಯಶಸ್ವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಚಿನ್ ವಿಶ್ವ ಕ್ರಿಕೆಟ್ ನಲ್ಲಿ 100 ಶತಕಗಳನ್ನು ದಾಖಲಿಸಿದ್ದಾರೆ. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ದಾಖಲಿಸಿದ್ದ ದಾಖಲೆ ಕೂಡ ಅವರ ಹೆಸರಿನಲ್ಲಿದೆ. ಇನ್ನೊಂದೆಡೆ ಸೌರವ್ ಗಂಗೂಲಿ ಬಲಿಷ್ಠ ಟೀಮ್ ಇಂಡಿಯಾವನ್ನು ಕಟ್ಟಲು ಭದ್ರ ಫೌಂಡೇಷನ್ ಹಾಕಿಕೊಟ್ಟಿದ್ದಾರೆ ಎಂಬ ಬಿರುದು ಇದೆ. 2003ರ ವಿಶ್ವಕಪ್ ನಲ್ಲಿ ತಂಡವನ್ನು ಫೈನಲ್ ಗೆ ತನಕ ಕೊಂಡೊಯ್ದಿದ್ದ ಹೆಗ್ಗಳಿಕೆ ಗಂಗೂಲಿಗೆ ಇದೆ.