ಐಸಿಸಿ ಮುಖ್ಯಸ್ಥ ಗ್ರೇಗ್ ಬಾರಕ್ಲೆ ಅವರಿಗೆ ಅಧಿಕಾರದಲ್ಲಿ ಮುಂದುವರೆಸಲು ಬಿಸಿಸಿಐ ನಿರ್ಧರಿಸಿದ್ದು ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಪ್ರತಿನಿಧಿಯಾಗಿ ಐಸಿಸಿಗೆ ಕಳುಹಿಸದಿರಲು ನಿರ್ಧರಿಸಿದೆ.
ಮಂಗಳವಾರ ನಡೆದ ವಿಶೇಷ ವಾರ್ಷಿಕ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಐಸಿಸಿಯ ಪ್ರತಿನಿಧಿಯಾಗಿರುವ ಬಿಸಿಸಿಐ ಪ್ರತಿನಿಧಿಗಳಿಗೆ ಈ ನಿರ್ಧಾರವನ್ನು ಬೆಂಬಲಿಸುವಂತೆ ಸೂಚಿಸಿದೆ.
ಐಸಿಸಿಯಲ್ಲಿ ಇಬ್ಬರು ಬಿಸಿಸಿಐ ಪ್ರತಿನಿಧಿಗಳಿದ್ದಾರೆ. ಐಸಿಸಿ ಮಂಡಳಿಯ ಸಭೆಗೆ ಜಯ್ ಶಾ ಆಗವಹಿಸಲಿದ್ದಾರೆ. ನ್ಯೂಜಿಲೆಂಡ್ ನ ಗ್ರೇಗ್ ಬಾರ್ಕ್ಲೆ ಅವರ ಪುನಾರಯ್ಕೆಗೆ ಬೆಂಬಲ ನೀಡಿದೆ.
ಐಸಿಸಿಯಲ್ಲಿ ಪಾಲ್ಗೊಳು ಬಿಸಿಸಿಐ ಪದಾಧಿಕಾರಿಗಳಿಗೆ ವಿಶೇಷ ಸಭೆ ಸಂಪೂರ್ಣ ಅಧಿಕಾರ ನೀಡಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದ್ದಾರೆ.
ನಿನ್ನೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಗಂಗೂಲಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುತ್ತಿರುವ ಕುರಿತು ವಿವಾದಾತ್ಮ ಹೇಳಿಕೆ ನೀಡಿದ್ದರು.
ಐಸಿಸಿ ಮುಖ್ಯಸ್ಥನ ಸ್ಥಾನಕ್ಕೆ ಸೌರವ್ ಗಂಗೂಲಿ ಅವರನ್ನು ಆಯ್ಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿಯನ್ನು ಮಾಡಿದ್ದರು.
ಸೌರವ್ ಗಂಗೂಲಿ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಚುನಾವಣೆಗೆ ಸ್ಪರ್ಧಿಸಲಿ ನಿರ್ಧರಿಸಿದ್ದಾರೆ. ಅ.31ರಂದು ಚುನಾವಣೆ ನಡೆಯಲಿದೆ.