ಐಸಿಸಿ ವರ್ಷದ ಮಹಿಳಾ ಟಿ-20 ತಂಡದಲ್ಲಿ ಭಾರತದ ಸ್ಮತಿ ಮಂದಾನ
ಐಸಿಸಿ ಟಿ-20 ಮಹಿಳಾ ವರ್ಷದ ಕ್ರಿಕೆಟ್ ತಂಡದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಉಪ ನಾಯಕಿ ಸ್ಮತಿ ಮಂದಾನ ಅವರು ಸ್ಥಾನ ಪಡೆದುಕೊಂಡಿದ್ದಾರೆ.
ಆದ್ರೆ ಐಸಿಸಿ ಟಿ-20 ಪುರುಷರ ವರ್ಷದ ಕ್ರಿಕೆಟ್ ತಂಡದಲ್ಲಿ ಭಾರತದ ಆಟಗಾರರು ಸ್ಥಾನ ಪಡೆದುಕೊಂಡಿಲ್ಲ.
2021ರ ಸಾಲಿನಲ್ಲಿ ಭಾರತದ ಪರ ಸ್ಮøತಿ ಮಂದಾನ ಅವರು ಗರಿಷ್ಠ ರನ್ ದಾಖಲಿಸಿದ್ದ ಆಟಗಾರ್ತಿಯಾಗಿದ್ದಾರೆ. 9 ಪಂದ್ಯಗಳನ್ನು ಆಡಿರುವ ಸ್ಮøತಿ ಮಂದಾನ ಅವರು 31.87 ಸರಾಸರಿಯಲ್ಲಿ 255 ರನ್ ದಾಖಲಿಸಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳು ಕೂಡ ಇವೆ.
ಇನ್ನುಳಿದಂತೆ ಐಸಿಸಿ ವರ್ಷದ ಟಿ-20 ಮಹಿಳಾ ತಂಡದ ನಾಯಕಿಯಾಗಿ ಇಂಗ್ಲೆಂಡ್ ನ ನ್ಯಾಟ್ ಸ್ಕಿವೆರ್ ಅವರು ಆಯ್ಕೆಯಾಗಿದ್ದಾರೆ. ಆಲ್ ರೌಂಡರ್ ಆಗಿರುವ ಸ್ಕಿವೆರ್ ಅವರು 10 ವಿಕೆಟ್ ಹಾಗೂ 153 ರನ್ ಕೂಡ ದಾಖಲಿಸಿದ್ದಾರೆ. ಒಂದು ಅರ್ಧಶತಕ ಸಿಡಿಸಿದ್ದಾರೆ.
ಐಸಿಸಿ ವರ್ಷದ ಟಿ-20 ಮಹಿಳಾ ತಂಡ
ಸ್ಮತಿ ಮಂದಾನ (ಭಾರತ)
ಟಾಮಿ ಬ್ಯುಮೌಂಟ್ (ಇಂಗ್ಲೆಂಡ್)
ಡ್ಯಾನಿ ವ್ಯಾಟ್ (ಇಂಗ್ಲೆಂಡ್)
ಗ್ಯಾಬಿ ಲುವಿಸ್ (ಐರ್ಲೆಂಡ್)
ನ್ಯಾಟ್ ಸ್ಕಿವೆರ್ (ನಾಯಕಿ – ಇಂಗ್ಲೆಂಡ್)
ಆಮಿ ಜೋನ್ಸ್ (ವಿಕೆಟ್ ಕೀಪರ್ – ಇಂಗ್ಲೆಂಡ್)
ಲೌರಾ ವೊಲ್ವಾರಾಟ್ (ದಕ್ಷಿಣ ಆಫ್ರಿಕಾ)
ಮಾರಿಝಾನ್ ಕಾಪ್ (ದಕ್ಷಿಣ ಆಫ್ರಿಕಾ)
ಸೋಫಿ ಎಕ್ಲಾಸ್ಟೋನ್ (ಇಂಗ್ಲೆಂಡ್)
ಲಾರಿನ್ ಫೀರಿ ( ಜಿಂಬಾಬ್ವೆ)
ಶಬ್ನಿಮ್ ಇಸ್ಮಾಯಿಲ್ (ದಕ್ಷಿಣ ಆಫ್ರಿಕಾ)