ಪಾಕ್ ತಂಡದ ತಾರಾ ವೇಗಿ ಶಾಹೀನ್ ಶಾ ಅಫ್ರೀದಿ ಮಾಜಿ ನಾಯಕ ಶಾಹೀದ್ ಅಫ್ರೀದಿ ಪುತ್ರಿ ಆನ್ಶಾ ಜೊತೆ ಕರಾಚಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಜೋಡಿ 2 ವರ್ಷದ ಹಿಂದೆಯೆ ಎಂಗೇಜ್ ಆಗಿತ್ತು. ಶುಕ್ರವಾರ ಕರಾಚಿಯ ಮಸೀದಿಯಲ್ಲಿ ಈ ಜೋಡಿ ವಿವಾಹವಾಗಿದೆ.ಈ ಜೋಡಿಯ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದವು.
ವಿವಾಹ ಸಮಾರಂಭದಲ್ಲಿ ಪಾಕ್ ಆಟಗಾರರಾದ ನಾಯಕ ಬಾಬರ್ ಅಜಂ, ಸರ್ಫಾರಾಜ್ ಅಹ್ಮದ್, ನಸೀಮ್ ಶಾ, ಶಾದಾಬ್ ಖಾನ್, ಸ್ಕ್ವಾಶ್ ಆಟಗಾರ ಜಾಹಂಗೀರ್ ಖಾನ್ ಉಪಸ್ಥಿತರಿದ್ದರು.
ನಿಖಾಹ ಆದ ನಂತರ ಆರತಾಕ್ಷತೆ ಸಮಾರಂಭ ನಡೆಯಲಿದೆ ಎಂದು ತಿಳಿದು ಬಂದಿದೆ.
ವೇಗಿ ಶಾಹೀನ್ ಕುಟುಂಬ ಕರಾಚಿಗೆ 2 ದಿನಗಳ ಮುಂಚಿತವಾಗಿ ತಲುಪಿತ್ತು ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿ ಮೆಹಂದಿ ಕಾರ್ಯಕ್ರಮ ನಡೆದಿತ್ತು ಎಂದು ತಿಳಿದು ಬಂದಿದೆ.
22 ವರ್ಷದ ಶಾಹೀನ್ ಅಫ್ರೀದಿ 25 ಟೆಸ್ಟ್ 32 ಏಕದಿನ ಮತ್ತು 47 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ.