ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿ ಕೊಹ್ಲಿಯೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದು, ಇವರ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಕೊನೆಯ ಕ್ಷಣದಲ್ಲಿ ನಾಲ್ವರು ಅಭಿಮಾನಿಗಳು ಭದ್ರತಾ ಸಿಬ್ಬಂದಿಯನ್ನು ದೂಡಿಕೊಂಡು ಮೈದಾನಕ್ಕೆ ನುಗ್ಗಿದ್ದರು. ಕೆಲವರು ವಿರಾಟ್ ಕೊಹ್ಲಿ ಜೊತೆ ಸೆಲ್ಫಿ ಕೂಡ ತೆಗೆದುಕೊಂಡಿದ್ದಾರೆ.
https://twitter.com/36__NotAllOut/status/1503238378615369728?s=20&t=DbdrqRTP5bdWzPhk2-xS6A
ಶ್ರೀಲಂಕಾ ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಮೊಹಮ್ಮದ್ ಶಮಿ ಎಸೆತದಲ್ಲಿ ಶ್ರೀಲಂಕಾ ಬ್ಯಾಟ್ಸ್‌ಮನ್ ಕುಸಾಲ್ ಮೆಂಡಿಸ್ ಗಾಯಗೊಂಡಿದ್ದರು. ಆ ವೇಳೆ ಅವರು ಫಿಸಿಯೋ ಸಹಾಯ ಪಡೆಯುತ್ತಿದ್ದರು. ಈ ವೇಳೆ ಪಂದ್ಯ ಸ್ಥಗಿತಗೊಂಡಿತ್ತು. ಇದೇ ವೇಳೆಗೆ ನಾಲ್ವರು ಅಭಿಮಾನಿಗಳು ಮೈದಾನ ಪ್ರವೇಶಿಸಿದರು. ಬಳಿಕ ಭದ್ರತಾ ಸಿಬ್ಬಂದಿ ಆತನನ್ನು ಮೈದಾನದಿಂದ ಹೊರಗೆ ಕರೆದೊಯ್ದರು.
https://twitter.com/i/status/1503041339289894913
ಶ್ರೀಲಂಕಾ ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಮೊಹಮ್ಮದ್ ಶಮಿ ಎಸೆತದಲ್ಲಿ ಶ್ರೀಲಂಕಾ ಬ್ಯಾಟ್ಸ್‌ಮನ್ ಕುಸಾಲ್ ಮೆಂಡಿಸ್ ಗಾಯಗೊಂಡಿದ್ದರು. ಆ ವೇಳೆ ಅವರು ಫಿಸಿಯೋ ಸಹಾಯ ಪಡೆಯುತ್ತಿದ್ದರು. ಈ ವೇಳೆ ಪಂದ್ಯ ಸ್ಥಗಿತಗೊಂಡಿತ್ತು. ಇದೇ ವೇಳೆಗೆ ನಾಲ್ವರು ಅಭಿಮಾನಿಗಳು ಮೈದಾನ ಪ್ರವೇಶಿಸಿದರು. ಬಳಿಕ ಭದ್ರತಾ ಸಿಬ್ಬಂದಿ ಆತನನ್ನು ಮೈದಾನದಿಂದ ಹೊರಗೆ ಕರೆದೊಯ್ದರು.
ಈ ಘಟನೆಯ ನಂತರ, ಬೆಂಗಳೂರು ನಗರ ಪೊಲೀಸರು ನಾಲ್ವರು ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಿಕ್ಕಿಬಿದ್ದ ನಾಲ್ವರು ಯುವಕರನ್ನು ತಕ್ಷಣವೇ ಕ್ರೀಡಾಂಗಣದಿಂದ ಹೊರ ಹಾಕಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಇವರಲ್ಲಿ ಇಬ್ಬರು ಅಪ್ರಾಪ್ತರಾಗಿದ್ದು, ಪೊಲೀಸರು ಅವರ ವಿರುದ್ಧ ಐಪಿಸಿ ಸೆಕ್ಷನ್ 447 ಅಂದರೆ ಕ್ರಿಮಿನಲ್ ಉಲ್ಲಂಘನೆ, 269 ಅಂದರೆ ನಿರ್ಲಕ್ಷ್ಯದಿಂದ ಮಾರಣಾಂತಿಕ ಸಾಂಕ್ರಾಮಿಕ ರೋಗ ಹರಡುವ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.