ಅತಿಥೇಯ ದಕ್ಷಿಣ ಆಫ್ರಿಕಾ ವೆಸ್ಟ್ಇಂಡೀಸ್ ವಿರುದ್ಧ 284 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ.
ಇಲ್ಲಿನ ವಾಂಡರರ್ಸ್ ಮೈದಾನದಲ್ಲಿ ನಡೆದ ನಾಲ್ಕನೆ ದಿನದಾಟದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಎರಡನೆ ಇನ್ನಿಂಗ್ಸ್ನಲ್ಲಿ 321 ರನ್ಗಳಿಗೆ ಆಲೌಟ್ ಆಯಿತು. ವೆಸ್ಟ್ಇಂಡೀಸ್ ಎರಡನೆ ಇನ್ನಿಂಗ್ಸ್ನಲ್ಲಿ ಕೇವಲ 106 ರನ್ಗಳಿಗೆ ಆಲೌಟ್ ಆಯಿತು.
ದಿನದಾಟದ ಆರಂಭದಲ್ಲಿ ಬ್ಯಾಟಿಂಗ್ ಮುಂದುವರೆಸಿದ ನಾಯಕ ಟೆಂಬಾ ಬಾವುಮೆ 172, ಕೇಶವ್ ಮಹಾರಾಜ್ 10, ಗೆರಾಲ್ಡ್ ಅಜೇಯ9, ರಬಾಡ 16 ರನ್ ಗಳಿಸಿದರು.
ವಿಂಡೀಸ್ ಪರ ಕೈಲೆ ಮೇಯರ್ಸ್, ಜಾಸನ್ ಹೋಲ್ಡರ್ ತಲಾ 3 ವಿಕೆಟ್ ಪಡೆದರು. ಅಲ್ಜಾರಿ ಜೋಎಸೆಫ್ 2 ವಿಕೆಟ್, ರೀಫರ್ ಮತ್ತು ರೋಚ್ ತಲಾ 1 ವಿಕೆಟ್ ಪಡೆದರು.
391 ರನ್ಗಳ ಸವಾಲು ಬೆನ್ನತ್ತಿದ ವೆಸ್ಟ್ ಇಂಡೀಸ್ ದಕ್ಷಿಣ ಆಫ್ರಿಕಾದ ಸಂಘಟಿತ ದಾಳಿಗೆ ತತ್ತರಿಸಿತು.
ಕ್ರೇಗ್ ಬ್ರಾಥ್ವೈಟ್ 18, ಬ್ಲಾಕ್ವುಡ್ 4, ಜೋಶು ಡಾ ಸಿಲ್ವಾ 34 ರನ್ ಹೊಡೆದರ, ಜಾಸನ್ ಹೋಲ್ಡರ್ 19, ಅಲ್ಜಾರಿ ಜೋಸೆಫ್ 18 ರನ್ ಗಳಿಸಿದರು.
ದಕ್ಷಿಣ ಆಫ್ರಿಕಾ ಪರ ಹಾರ್ಮರ್, ಗೆರಾಲ್ಡ್ ಕೋಟ್ಜ್ ತಲಾ 3 ವಿಕೆಟ್ ಪಡೆದರು. ಕೇಶವ್ ಮಹಾರಾಜ್ ಮತ್ತು ರಬಾಡ ತಲಾ 2 ವಿಕೆಟ್ ಪಡೆದರು.