ನಿಮ್ಮ ಶ್ರೇಷ್ಠತೆಯಿಂದ ಜಗತ್ತಿಗೆ ಭಾರತದ ಕ್ರೀಡೆಯಲ್ಲಿರುವ ತಾಕತ್ತು ಗೊತ್ತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾನಿಯಾ ಮಿರ್ಜಾಗೆ ಪತ್ರದಲ್ಲಿ ತಿಳಿಸಿದ್ದಾರೆ. ಕಳೆದ ತಿಂಗಳಷ್ಟೆ ಭಾರತದ ತಾರಾ ಅಥ್ಲೀಟ್ ಸಾನಿಯಾ ಮಿರ್ಜಾ ವೃತ್ತಿ ಜೀವನಕ್ಕೆ ವಿದಾಯ ಹೇಳಿದರು.
ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪತ್ರ ಮೂಲಕ ಸಾನಿಯಾ ಅವರಿಗೆ ಅಭಿನಂದಿಸಿದರು. ಪ್ರಧಾನಿ ಬರೆದ ಪತ್ರವನ್ನು ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಾನಿಯಾ ಮಿರ್ಜಾ ಭಾರತದ ಕ್ರೀಡೆಯಲ್ಲಿ ಅಳಿಸಲಾಗದ ಹೆಜ್ಜೆ ಗುರುತನ್ನು ಬಿಟ್ಟುಹೋಗಿದ್ದಾರೆ, ಹೆಚ್ಚಿನ ಮಹಿಳೆಯರು ಟೆನಿಸ್ ಅನ್ನು ವೃತ್ತಿಜೀವನವಾಗಿ ಆಯ್ಕೆ ಮಾಡಿಕೊಂಡು ಯಶಸ್ಸು ಕಾಣಬಹುದು ಎಂದಿದ್ದಾರೆ. ಮುಂದಿನ ಅಥ್ಲೀಟ್ಗಳಿಗೆ ಇದು ಸೂರ್ತಿದಾಯಕವಾಗಲಿದೆ ಎಂದಿದ್ದಾರೆ.
ನಿಮ್ಮ ಶ್ರೇಷ್ಠತೆಯಿಂದ ಜಗತ್ತಿಗೆ ಭಾರತದ ಕ್ರೀಡೆಯಲ್ಲಿರುವ ತಾಕತ್ತು ಗೊತ್ತಾಗಿದೆ. ನೀವು ಟೆನಿಸ್ ಆಡಲು ಆರಂಭಿಸಿದಾಗ ಪರಿಸ್ಥಿತಿ ವಿಭಿನ್ನವಾಗಿತ್ತು. ಇದೀಗ ಹೆಚ್ಚಿನ ಮಹಿಳೆಯರು ಟೆನಿಸ್ ಆಡಬಹುದೆಂಬುದನ್ನು ನಿರೂಪಿಸಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭವಿಷ್ಯದಲ್ಲಿ ಯುವ ಅಥ್ಲೀಟ್ಗಳಿಗೆ ಮೆಂಟರ್ ಆಗಿ ಕಾರ್ಯ ನಿರ್ವಹಿಸುವಂತೆ ಪ್ರಧಾನಿ ಸಾನಿಯಾ ಮಿರ್ಜಾಗೆ ಸಲಹೆ ನೀಡಿದ್ದಾರೆ.