ಭಾರತೀಯ ಟೆನಿಸ್ ಲೋಕದಲ್ಲಿ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಹೆಸರು ಬಿಟ್ಟರೆ ಮತ್ತೆ ನೆನಪಾಗುವುದೇ ಸಾನಿಯಾ ಮಿರ್ಜಾ ಹೆಸರು. ಹೈದ್ರಾಬಾದ್ನ ಈ ಮೂಗುತಿ ಸುಂದರಿ. ಭಾರತಕ್ಕೆ ಮಹಿಳಾ ವಿಭಾಗದಲ್ಲಿ ಮೊದಲ ಗ್ರಾನ್ ಸ್ಲಾಂ ಗೆದ್ದು ಕೊಟ್ಟ ಸಾನಿಯಾ ಮಿರ್ಜಾ ಈ ಸೀಸನ್ ನಂತರ ಆಟಕ್ಕೆ ವಿದಾಯ ಹೇಳಲಿದ್ದಾರೆ.
WTA ಸೀಸನ್ನಲ್ಲಿ ಇದೇ ಕೊನೆಯ ಪಯಣ ಎಂದು ಸಾನಿಯಾ ಅಧಿಕೃತ ಮಾಡಿದ್ದಾರೆ. ಈ ಮೂಲಕ ಹಲವು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ನಲ್ಲಿ ಮೊದಲ ಸುತ್ತಿನಲ್ಲೇ ಹೊರ ಬಿದ್ದ ಬಳಿಕ ಸಾನಿಯಾ ಈ ನಿರ್ಧಾರ ಮಾಡಿದ್ದಾರೆ. ಟೂರ್ನಿಯಲ್ಲಿ 12ನೇ ಶ್ರೇಯಾಂಕ ಪಡೆದಿದ್ದ ಸಾನಿಯಾ ಮತ್ತು ನಾಡಿಯಾ ಕಿಚೊನೆಕ್ ಜೋಡಿ 4-6, 6-7 ಸೆಟ್ ಗಳಿಂದ ಸೋತು ಮೊದಲ ಸುತ್ತಿನಲ್ಲೇ ಹೊರ ಬಿದ್ದಿತ್ತು. ಅಮೆರಿಕದ ರಾಜೀವ್ ರಾಮ್ ಜೊತೆ ಸಾನಿಯಾ ಮಿಕ್ಸೆಡ್ ಡಬಲ್ಸ್ ಆಟ ಇನ್ನೂ ಆರಂಭಿಸಬೇಕಿದೆ.
35 ವರ್ಷದ ಸಾನಿಯಾ ವಿಶ್ವ ಟೆನಿಸ್ ಲೋಕದ ಮಹಿಳಾ ಡಬಲ್ಸ್ ನಲ್ಲಿ ಮಾಜಿ ನಂಬರ್ ಆಟಗಾರ್ತಿಯಾಗಿದ್ದರು. ಸಿಂಗಲ್ಸ್ ನಲ್ಲಿ 27ನೇ ಶ್ರೇಯಾಂಕ ಪಡೆದು ಭಾರತೀಯರ ಪೈಕಿ ಸಾಧನೆ ಮಾಡಿದ್ದರು. ಮಾರ್ಟಿನಾ ಹಿಂಗಿಸ್ ಜೊತೆ ಡಬಲ್ಸ್ ನಲ್ಲಿ ಸಾನಿಯ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. 2016ರ ಆಸ್ಟ್ರೇಲಿಯನ್ ಓಪನ್ನಲ್ಲಿ ಸಾನಿಯಾ ಕೊನೆಯ ಬಾರಿ ಗ್ರಾನ್ ಸ್ಲಾಂ ಗೆದ್ದು ಸಂಭ್ರಮಿಸಿದ್ದರು.