ಮುಂಬರುವ ಏಷ್ಯನ್ ಮಿಶ್ರ ತಂಡ ಚಾಂಪಿಯನ್ಶಿಪ್ ಟ್ರಯಲ್ಸ್ಗೆ ಗೈರು ಆಗಲಿರುವ ಶಟ್ಲರ್ಗಳ ಪೈಕಿ ಎರಡು ಬಾರಿ ಕಾಮನ್ವೆಲ್ತ್ ಚಾಂಪಿಯನ್ ಸೈನಾ ನೆಹ್ವಾಲ್ ಕೂಡ ಒಬ್ಬರಾಗಿದ್ದಾರೆ.
ಟ್ರಯಲ್ಸ್ ನಲ್ಲಿ ವಿಶ್ವದ ಮಾಜಿ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ಆಕಾರಶಿ ಕಶ್ಯಪ್ ಮತ್ತು ಮಾಳವಿಕಾ ಬಾನಸೂದ್ ಆಡಬೇಕಿತ್ತು.
ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಸಿಂಧು ಜತೆ ಎರಡನೆ ಆಟಗಾರ್ತಿಯನ್ನು ಆಯ್ಕೆ ಮಾಡಲು
ಸೀನಿಯರ್ ಸೆಲಕ್ಷನ್ ಸಮಿತಿ ಆಯ್ಕೆ ಮಾಡಲು ಸೂಚಿಸಿತ್ತು. ಇದೀಗ ಸೈನಾ ನೆಹ್ವಾಲ್ ಮತ್ತು ಮಾಳವಿಕಾ ಟ್ರಯಲ್ಸ್ ಆಡದಿರಲು ನಿರ್ಧರಿಸಿದ್ದಾರೆ.
ಸೈನಾ ನೆಹ್ವಾಲ್ ಮತ್ತು ಮಾಳವಿಕಾ ಟ್ರಯಲ್ಸ್ಗೆ ಲಭ್ಯವಿರುವುದಿಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೋರ್ವ ಆಟಗಾರ್ತಿ ಅಶ್ಮಿತಾ ಚಾಲಿಯಾ ಅವರನ್ನು ಟ್ರಯಲ್ಸ್ಗೆ ಆಹ್ವಾನಿಸಲಾಗಿದೆ. ಎಂದು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ಹೇಳಿದೆ.
2022ರಲ್ಲಿ ಸೈನಾ ನೆಹ್ವಾಲ್ ಕಠಿಣ ಸವಾಲುಗಳನ್ನು ಎದುರಿಸಿದರು. ಫಾರ್ಮ್ ಸಮಸ್ಯೆ ಹಾಗೂ ಗಾಯದ ಸಮಸ್ಯೆಯನ್ನು ಎದುರಿಸಿದ್ದರು, ಕಳೆದ ವರ್ಷ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ಟ್ರಯಲ್ಸ್ ಅನ್ನು ಕೂಡ ಸೈನಾ ಆಡಿರಿಲಿಲ್ಲ.