S.Africa loose Netherlands ಟಿ20 ವಿಶ್ವಕಪ್ನಲ್ಲಿ ಮತ್ತೊಂದು ಅನಿರೀಕ್ಷಿತಾ ಫಲಿತಾಂಶ ಹೊರ ಬಿದ್ದಿದೆ. ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವೆನಿಸಿದ್ದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಶಿಶು ನೆದರ್ಲೆಂಡ್ಗೆ ಶರಣಾಗಿದೆ.
ಇದರೊಂದಿಗೆ ಪ್ರಮುಖ ಟೂರ್ನಿಗಳಲ್ಲಿ ಪಂದ್ಯವನ್ನು ಕೈಚೆಲ್ಲುವ ಚಾಳಿಯನ್ನು ಮುಂದುವರೆಸಿದೆ. ಚೋಕರ್ಸ್ ಎಂಬ ಹಣೆಪಟ್ಟಿಯೊಂದಿಗೆ ತವರಿಗೆ ಮರಳಲಿದೆ.
ದಕ್ಷಿಣ ಆಫ್ರಿಕಾ ಸೋಲಿಗೆ ಹಲವಾರು ಕಾರಣಗಳಿವೆ. ಇದರಲ್ಲಿ ಕೆಲವು ತಪ್ಪುಗಳು ತಂಡವನ್ನು ಸೋಲಿನ ಸುಳಿಗೆ ಸಿಲುಕಿಸಿದೆ.
ಬೌಲರ್ಗಳ ವೈಫಲ್ಯ :
ಮೊದಲ ವಿಕೆಟ್ಗೆ 58 ರನ್ಗಳ ಉತ್ತಮ ಆರಂಭ ಪಡೆದ ನೆದರ್ಲೆಂಡ್ಗೆ ಮಧ್ಯಮ ಓವರ್ಗಳಲ್ಲಿ ಕುಸಿಯಲಾರಂಭಿಸಿತು. ನಾಲ್ಕನೆ ಕ್ರಮಾಂಕದಲ್ಲಿ ಬಂದ ಕೊಲಿನ್ ಅಕೆರ್ಮನ್ ಅಜೇಯ 41 ರನ್ ಗಳಿಸಿ ತಂಡದ ಸ್ಕೋರ್ ಹೆಚ್ಚಿಸಿದರು. ಸೌತ್ ಆಫ್ರಿಕಾ ಬೌಲರ್ಗಳು ಡೆತ್ ಓವರ್ಗಳಲ್ಲಿ ವಿಕೆಟ್ ಕೀಳುವಲ್ಲಿ ವಿಫಲರಾದರು. ರಬಾಡ, ನೋರ್ಟ್ಜೆರಂತಹ ಸ್ಟಾರ್ ಬೌಲರ್ಗಳಿದ್ದರೂ ಪ್ರಯೋಜನವಾಗಲಿಲ್ಲ.
ನೆದರ್ಲೆಂಡ್ ಸವಾಲಿನ ಮೊತ್ತ ನೀಡಲು ದಕ್ಷಿಣ ಆಫ್ರಿಕಾ ಬೌಲರ್ಗಳ ವೈಫಲ್ಯ ಕಾರಣ. ಟಿ20 ಸ್ಪೆಶಲಿಸ್ಟ್ ಗಳೆನಿಸಿದ್ದ ಬೌಲರ್ಗಳು ವಿಫಲರಾದರು.ವಾಯ್ನೆ ಪಾರ್ನೆಲ್ 32ಕ್ಕೆ 0, ರಬಾಡ 37ಕ್ಕೆ 0,ಲುಂಗಿಎನ್ ಗಿಡಿ 35ಕ್ಕೆ 0 ವಿಕೆಟ್ ಪಡೆದರು.
ಬ್ಯಾಟಿಂಗ್ ವೈಫಲ್ಯ:
ತಂಡದ ಸೋಲಿಗೆ ಪ್ರಮುಖ ಕಾರಣ ಬ್ಯಾಟಿಂಗ್ ವೈಫಲ್ಯ.ನೆದರ್ಲೆಂಡ್ ನೀಡಿದ 159 ರನ್ ಗುರಿ ದಕ್ಷಿಣ ಆಫ್ರಿಕಾಕ್ಕೆ ಸವಾಲಿನ ಗುರಿ ಆಗಿರಲಿಲ್ಲ. ಯಾವ ಬ್ಯಾಟರ್ಗಳು ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ. ಜೊತೆಯಾಟವನ್ನೂ ನೀಡಲಿಲ್ಲ. ಡೇವಿಡ್ ಮಿಲ್ಲರ್, ರೊಸೊರಂತಹ ಸ್ಫೋಟಕ ಬ್ಯಾಟರ್ಗಳು ಬೇಗೆನೆ ಪೆವಿಲಿಯನ್ ಸೇರಿದರು.
ಟಾಸ್ ಗೆದ್ದಾಗಲೂ ಯಡವಟ್ಟು
ಟಾಸ್ ಗೆದ್ದಾಗಲೂ ದಕ್ಷಿಣ ಆಫ್ರಿಕಾ ಯಡವಟ್ಟು ಮಾಡಿಕೊಂಡಿದೆ. ನಾಯಕ ಬಾವುಮಾ ಟಾಸ್ ಗೆದ್ದಾಗ ಫೀಲ್ಡಿಂಗ್ ಆಯ್ದುಕೊಂಡರು. ಪಂದ್ಯ ಮುಗಿದ ನಂತರ ಸ್ವತಃ ಬಾವುಮಾ ಬ್ಯಾಟಿಂಗ್ ತೆಗೆದುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.