ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಿರುವುದು 5 ಪಂದ್ಯ. ಗಳಿಸಿರುವುದು 6 ಅಂಕ. ಡೆಲ್ಲಿ ಕ್ಯಾಪಿಟಲ್ಸ್ 4 ಪಂದ್ಯಗಳಿಂದ 4 ಅಂಕಪ ಪಡೆದು 7ನೇ ಸ್ಥಾನದಲ್ಲಿದೆ. ವಾಂಖೆಡೆಯಲ್ಲಿ ನಡೆಯುವ 6 ಮತ್ತು 7ನೇ ಸ್ಥಾನಿಗಳ ಕದನ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದೆ.
RCB ಶಕ್ತಿ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಟಾಪ್ ಆರ್ಡರ್ ಬ್ಯಾಟಿಂಗ್ ಸಮಸ್ಯೆ ದೊಡ್ಡದಿದೆ. ನಾಯಕ ಫಾಫ್ ಡು ಪ್ಲೆಸಿಸ್, ಮಾಜಿ ನಾಯಕ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಅನುಜ್ ರಾವತ್ ಅಂದುಕೊಂಡಂತೆ ಆಡುತ್ತಿಲ್ಲ. ಆದರೆ ಹೊಸಬ ಸುಯೇಶ್ ಪ್ರಭುದೇಸಾಯಿ, ಶಹಬಾಸ್ ಅಹ್ಮದ್ ಮತ್ತು ದಿನೇಶ್ ಕಾರ್ತಿಕ್ ಆಟ ಎದುರಾಳಿಯ ನಿದ್ದೆಗೆಡಿಸಿದೆ. ವನಿಂದು ಹಸರಂಗ ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ನಿರೀಕ್ಷೆ ಮಾಡಿದಷ್ಟು ಮಿಂಚಿತ್ತಿಲ್ಲ. ಹರ್ಷಲ್ ಪಟೇಲ್ ಕಂ ಬ್ಯಾಂಕ್ ಡೆತ್ ಓವರ್ ಬೌಲಿಂಗ್ ಶಕ್ತಿ ತುಂಬಿದೆ. ಮೊಹಮ್ಮದ್ ಸಿರಾಜ್ ಈ ಬಾರಿ ಐಪಿಎಲ್ ನಲ್ಲಿ ದುಬಾರಿ ಬೌಲರ್. ಜೋಶ್ ಹ್ಯಾಜಲ್ ವುಡ್ ಸ್ಥಾನ ಪಕ್ಕಾ.
ಆರ್ಸಿಬಿಯ ಬೌಲಿಂಗ್ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳಿವೆ. ಹ್ಯಾಜಲ್ ವುಡ್ ಕಂಟ್ರೋಲ್ ನಲ್ಲಿದ್ದರೆ, ಸಿರಾಜ್ ದುಬಾರಿ ಆಗುತ್ತಿದ್ದಾರೆ. ಹಸರಂಗ ಶ್ರೇಷ್ಠ ಮಟ್ಟದ ಪ್ರದರ್ಶನ ನೀಡುತ್ತಿಲ್ಲ. ಹರ್ಷಲ್ ಪಟೇಲ್ ರನ್ಗೆ ಕಡಿವಾಣ ಹಾಕಿದರೂ ವಿಕೆಟ್ ಬೀಳುತ್ತಿಲ್ಲ. ಆಕಾಶ್ ದೀಪ್ ಬದಲಿಗೆ ಸುಯೇಶ್ ಪ್ರಭು ದೇಸಾಯಿ ಸ್ಥಾನ ಪಡೆಯುತ್ತಾರೆ. ಶಹಬಾಸ್ ಮತ್ತು ಮ್ಯಾಕ್ಸ್ ವೆಲ್ ಕೂಡ ಬೌಲಿಂಗ್ ಮಾಡಬೇಕಾಗುತ್ತದೆ.
ಡೇಂಜರ್ ಡೆಲ್ಲಿ:
ಡೆಲ್ಲಿ ಕ್ಯಾಪಿಟಲ್ಸ್ ಸಿಕ್ಕಾಪಟ್ಟೆ ಡೇಂಜರಸ್. ಪೃಥ್ವಿ ಷಾ ಮತ್ತು ಡೇವಿಡ್ ವಾರ್ನರ್ ಅಬ್ಬರಕ್ಕೆ ಎದುರಾಳಿ ಬೌಲರ್ಗಳು ನುಚ್ಚುನೂರಾಗಿದ್ದು ಸುಳ್ಳಲ್ಲ. ರಿಷಬ್ ಪಂತ್ ಮತ್ತು ಲಲಿತ್ ಯಾದವ್ ಆಟ ತಂಡಕ್ಕೆ ಶಕ್ತಿ ತುಂಬಿದೆ. ರೋವ್ಮನ್ ಪೊವೆಲ್ ಬಿಗ್ ಹಿಟ್ಟಿಂಗ್ ಬಗ್ಗೆ ಡೆಲ್ಲಿ ನಂಬಿಕೆ ಇಟ್ಟುಕೊಂಡಿದೆ. ಅಕ್ಸರ್ ಪಟೇಲ್ ಮತ್ತು ಶಾರ್ದೂಲ್ ಥಾಕೂರ್ ಆಲ್ರೌಂಡರ್ಗಳು. ಸರ್ಫರಾಜ್ ಖಾನ್ ಯಾವ ಕ್ರಮಾಂಕದಲ್ಲಾದರೂ ಆಡಲು ಸಿದ್ಧರಿದ್ದಾರೆ. ಅನ್ರಿಚ್ ನೋರ್ಟ್ಜೆ ಮತ್ತು ಮುಸ್ತಾಫಿಜುರ್ ಬೌಲಿಂಗ್ ಎದುರು ಆಡುವುದು ಕಷ್ಟ. ಕುಲ್ ದೀಪ್ ಯಾದವ್ ಬೌಲಿಂಗ್ ಫಾರ್ಮ್ ನಿರ್ಣಾಯಕ.
ಡೆಲ್ಲಿ ಬೌಲಿಂಗ್ ಎದುರಾಳಿಯ ಎದೆನಡುಗಿಸುವುದು ಖಚಿತ. ನೋರ್ಟ್ಜೆ ಮತ್ತು ಮುಸ್ತಾಫಿಜುರ್ ಎದುರು ಆರಂಭದಲ್ಲಿ ರನ್ಗಳಿಸುವುದು ಕಷ್ಟ. ಕುಲ್ ದೀಪ್ ಮತ್ತು ಅಕ್ಸರ್ ಪಟೆಲ್ ಸ್ಪಿನ್ ಸಖತ್ ರನ್ ಬೇಟೆಯನ್ನು ಕಟ್ ಮಾಡುತ್ತದೆ. ಶಾರ್ದೂಲ್ ಥಾಕೂರ್ ಡೆತ್ ಓವರ್ ಸ್ಪೆಷಲಿಸ್ಟ್. ಲಲಿತ್ ಯಾದವ್ ಪಾರ್ಟ್ ಟೈಮ್ ಬೌಲರ್ ಅಲ್ಲ ಅನ್ನುವುದು ಎದುರಾಳಿಗೆ ಅರ್ಥಮಾಡಿಕೊಳ್ಳಬೇಕು.
ವಾಂಖೆಡೆ ಪಿಚ್:
ವಾಂಖೆಡೆ ಪಿಚ್ ಬಿಹೇವಿಯರ್ ಸಖತ್ ಇಂಟರೆಸ್ಟಿಂಗ್. ಪಂದ್ಯದ ಆರಂಭದಲ್ಲಿ ಸ್ವಿಂಗ್ ಮೂಲಕ ಪಾಸ್ಟ್ ಬೌಲರ್ಗಳಿಗೆ ನೆರವಾಗುತ್ತದೆ. ಇಬ್ಬನಿ ಬೀಳುತ್ತಿದ್ದಂತೆ ಬ್ಯಾಟ್ಸ್ ಮನ್ಗಳ ಆಟ ಶುರುವಾಗುತ್ತದೆ. ಹೀಗಾಗಿ ಟಾಸ್ ಮೇಲೆ ಹೆಚ್ಚು ಕಣ್ಣಿದೆ.