IPL 2022ಕ್ಕೆ ದಿನಗಣನೆ ಆರಂಭವಾಗಿದೆ. 10 ಫ್ರಾಂಚೈಸಿಗಳು ಅಭ್ಯಾಸವನ್ನು ಆರಂಭಿಸಿವೆ. 15ನೇ ಸೀಸನ್ನಲ್ಲಿ ಪ್ರಶಸ್ತಿ ಗೆಲ್ಲಲು ರಣತಂತ್ರ ಸಿದ್ಧವಾಗುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.
ಅಂದಹಾಗೇ, ಹೊಸ ತಂಡವನ್ನು ಕಟ್ಟಿರುವ ಆರ್ಸಿಬಿಯಲ್ಲಿ ಸಮಸ್ಯೆ ದೊಡ್ಡದಾಗಿ ಕಾಣುತ್ತಿದೆ. ಟಿ20ಗೆ ಬೇಕಾದ ಸ್ಪೋಟಕ ಆರಂಭ ತಂದುಕೊಡಬಲ್ಲ ಓಪನರ್ ಕಾಣಿಸುತ್ತಿಲ್ಲ. ಫಾಫ್ ಡು ಪ್ಲೆಸಿಸ್ ಜೊತೆ ವಿರಾಟ್ ಕೊಹ್ಲಿಯೇ ಅನಿವಾರ್ಯವಾಗಿ ಕಣಕ್ಕಿಳಿಯಬೇಕಿದೆ. ಓಪನಿಂಗ್ ಮಾತ್ರವಲ್ಲ, ಮಧ್ಯಮ ಕ್ರಮಾಂಕ ಹಾಗೂ ಫಿನಿಷರ್ಗಳ ಕೊರತೆಯೂ ಮೇಲ್ನೋಟಕ್ಕೆ ಕಾಣುತ್ತಿದೆ.
ಆರ್ಸಿಬಿ ಸಂಭಾವ್ಯ XI
- ಫಾಫ್ ಡು ಪ್ಲೆಸಿಸ್
- ವಿರಾಟ್ ಕೊಹ್ಲಿ
- ಅನುಜ್ ರಾವತ್
- ದಿನೇಶ್ ಕಾರ್ತಿಕ್
- ಶರ್ಫೆನ್ ರುದರ್ಫರ್ಡ್
- ವನಿಂದು ಹಸರಂಗ
- ಮಹಿಪಾಲ್ ಲೊಮ್ರೋರ್/ ಶಹಬಾಸ್ ಅಹಮದ್
- ಕರಣ್ ಶರ್ಮಾ
- ಹರ್ಷಲ್ ಪಟೇಲ್
- ಮೊಹಮ್ಮದ್ ಸಿರಾಜ್
- ಜೋಶ್ ಹ್ಯಾಜಲ್ವುಡ್
ಡು ಪ್ಲೆಸಿಸ್ ಮತ್ತು ಕೊಹ್ಲಿ ಇನ್ನಿಂಗ್ಸ್ ಆರಂಭಿಸದರೆ ಅನುಜ್ ರಾವತ್ ವನ್ ಡೌನ್ ಆಟಗಾರನಾಗಿ ಕಣಕ್ಕಿಳಿಯಬೇಕಾಗುತ್ತದೆ. ಕೆಲ ಪಂದ್ಯಗಳಲ್ಲಿ ಆಲ್ರೌಂಡರ್ ಕೋಟಾದಲ್ಲಿ ಆಡಬಲ್ಲ ಮಹಿಪಾಲ್ ಲೊಮ್ರೊರ್ ಅಥವಾ ಶಹಬಾಜ್ ಅಹ್ಮದ್ ರನ್ನು ಕೂಡ ಈ ಸ್ಥಾನದಲ್ಲಿ ಆಡಿಸಬಹುದು. ದಿನೇಶ್ ಕಾರ್ತಿಕ್, ಶರ್ಪೇನ್ ರುದರ್ ಫೋರ್ಡ್ ಮತ್ತು ವನಿಂದು ಹಸರಂಗ ಮಧ್ಯಮ ಸರದಿ ಹಾಗೂ ಫಿನಿಷರ್ಗಳ ಜವಾಬ್ದಾರಿ ನಿರ್ವಹಿಸುವುದು ಅನಿವಾರ್ಯ.
ಕರಣ್ ಶರ್ಮ ಲೆಗ್ ಚಹಲ್ ಆಡುತ್ತಿದ್ದ ಜಾಗದಲ್ಲಿ ಆಡಬಹುದು. ಹಸರಂಗ ಬೌಲಿಂಗ್ ಬೋನಸ್ ತಂಡಕ್ಕಿದೆ. ಹರ್ಷಲ್ ಪಟೇಲ್ ಡೆತ್ ಓವರ್ ಸ್ಪೆಷಲಿಸ್ಟ್ ಆಗಬಹುದು. ಸಿರಾಜ್ ಮತ್ತು ಜೋಶ್ ಹ್ಯಾಜಲ್ ವುಡ್ ಹೊಸ ಚೆಂಡು ಹಂಚಿಕೊಳ್ಳಬಹುದು.
ಆರ್ಸಿಬಿಗೆ ನಿಜಕ್ಕೂ ಸಾಕಷ್ಟು ಸಮಸ್ಯೆಗಳಿವೆ. ವಿರಾಟ್ ಮತ್ತು ಫಾಫ್ ಗಾಯಾಳುವಾದರೆ ರಿಪ್ಲೇಸ್ಮೆಂಟ್ ಆಟಗಾರರಿಲ್ಲ. ಡೆತ್ ಓವರುಗಳಲ್ಲಿ ಹರ್ಷಲ್ ದುಬಾರಿಯಾದರೆ ಆ ಸ್ಥಾನ ತುಂಬಬಲ್ಲ ಆಟಗಾರ ಕಾಣುತ್ತಿಲ್ಲ. ಕರಣ್ ಶರ್ಮಾ ಆಡದೇ ಹೋದ್ರೆಇನ್ನೊಬ್ಬ ಎಕ್ಸ್ ಟ್ರಾ ಬ್ಯಾಟ್ಸ್ಮನ್ ಆಡಿಸಬಹುದು. ಆದರೆ ಎಬಿಡಿ ವಿಲಿಯರ್ಸ್ ಜಾಗ ತುಂಬುವ ಆಟಗಾರ ಇನ್ನೊಬ್ಬನಿಲ್ಲ. ಒಟ್ಟಿನಲ್ಲಿ ಆರ್ಸಿಬಿ ಈ ಬಾರಿ ಹೊಸ ಪ್ರಯೋಗಕ್ಕೆ ಮುಂದಾಗಬೇಕಿದೆ. ಹೊಸ ನಾಯಕನಿಗೆ ಸವಾಲು ಸುಲಭದ್ದಾಗಿರಲ್ಲ ಅನ್ನುವುದು ಸ್ಪಷ್ಟ.