ಟೀಮ್ ಇಂಡಿಯಾದ ಟೆಸ್ಟ್ ನಾಯಕನಾಗಿ ರೋಹಿತ್ ಬೆಸ್ಟ್ – ಕೆವಿನ್ ಪೀಟರ್ಸನ್
ಟೀಮ್ ಇಂಡಿಯಾದ ಟೆಸ್ಟ್ ತಂಡವನ್ನು ಕೂಡ ರೋಹಿತ್ ಶರ್ಮಾ ಮುನ್ನಡೆಸಬೇಕು ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಹೇಳಿದ್ದಾರೆ.
ಏಕದಿನ ಮತ್ತು ಟಿ-20 ತಂಡದ ನಾಯಕನಾಗಿರುವ ರೋಹಿತ್ ಶರ್ಮಾಗೆ ಟೆಸ್ಟ್ ತಂಡವನ್ನು ಮುನ್ನಡೆಸುವ ಅವಕಾಶವನ್ನು ನೀಡಬೇಕು ಎಂದು ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಟೀಮ್ ಇಂಡಿಯಾದ ಟೆಸ್ಟ್ ನಾಯಕ ಯಾರು ಅನ್ನೋ ಪ್ರಶ್ನೆಗೆ ಎರಡು ಹೆಸರುಗಳು ಮುಂಚೂಣಿಯಲ್ಲಿ ಬರುತ್ತವೆ. ಒಂದು ಕೆ.ಎಲ್. ರಾಹುಲ್. ಇನ್ನೊಂದು ರೋಹಿತ್ ಶರ್ಮಾ. ಇಬ್ಬರು ಕೂಡ ಅದ್ಭುತ ಆಟಗಾರರು. ಆದ್ರೂ ನನ್ನ ಪ್ರಕಾರ ರೋಹಿತ್ ಬೆಸ್ಟ್. ಯಾಕಂದ್ರೆ ರೋಹಿತ್ ಆಟವನ್ನು ನಾನು ತುಂಬಾ ಇಷ್ಟಪಡುತ್ತೇನೆ. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ರೋಹಿತ್ ಶರ್ಮಾ ತುಂಬಾನೇ ಯಶ ಸಾಧಿಸಿದ್ದಾರೆ ಎಂದು ಪೀಟರ್ಸನ್ ಹೇಳಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ನಾಯಕತ್ವವನ್ನು ತ್ಯಜಿಸುವುಕ್ಕೆ ಮುಖ್ಯ ಕಾರಣ ನಿರಂತರವಾಗಿ ಜೈವಿಕ ಸುರಕ್ಷತೆಯಲ್ಲಿ ಆಡಿರುವುದು. ಹೀಗಾಗಿ ಅವರಿಗೆ ಒತ್ತಡ ಬಂದಿರಬೇಕು. ವಿರಾಟ್ ನಾಯಕತ್ವ ತ್ಯಜಿಸುವಾಗ ನನಗೆ ಅಚ್ಚರಿಯಾಗಿಲ್ಲ. ಯಾಕಂದ್ರೆ ವಿರಾಟ್ ಒತ್ತಡದಿಂದ ಹೊರಬರಲು ಈ ರೀತಿಯ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ ವಿರಾಟ್ ಕೊಹ್ಲಿ ಅವರನ್ನು ಟೀಕೆ ಮಾಡುವುದು ಸರಿಯಲ್ಲ. ಅದು ಅನ್ಯಾಯ.. ಮುರ್ಖತನ. ಯಾಕಂದರೆ ಬಯೋಬಬಲ್ ನಲ್ಲಿ ಆಡುವುದು ತುಂಬಾನೇ ಕಷ್ಟ ಎಂದು ಹೇಳಿದ್ರು.
ಇನ್ನು ಇಂಗ್ಲೆಂಡ್ ತಂಡ ಆಶಷ್ ಸರಣಿಯಲ್ಲಿ ಸೋಲಲು ಐಪಿಎಲ್ ಕಾರಣ ಎಂಬುದನ್ನು ಕೆವಿನ್ ಪೀಟರ್ಸನ್ ಒಪ್ಪುವುದಿಲ್ಲ.
ಇತ್ತೀಚೆಗೆ ಇಂಗ್ಲೆಂಡ್ ನ ಮಾಜಿ ಆಟಗಾರ ಡೇವಿಡ್ ಗಾವರ್ ಅವರು ಆಶಷ್ ಸೋಲಿಗೆ ಐಪಿಎಲ್ ಎಂದು ಟೀಕೆ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೀಟರ್ಸನ್, ಇದು ಮುರ್ಖತನದ ಹೇಳಿಕೆ. ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಕಳಪೆಯಾಗಲು ಐಪಿಎಲ್ ಕಾರಣವಲ್ಲ. ಕೌಂಟಿ ಕ್ರಿಕೆಟ್ ನ ವ್ಯವಸ್ಥೆಯೇ ಮುಖ್ಯ ಕಾರಣ. ಐಪಿಎಲ್ ನಲ್ಲಿ ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್ ಜಾನಿ ಬೇರ್ ಸ್ಟೋವ್ ಮಾತ್ರ ಆಡುತ್ತಿದ್ದಾರೆ. ಇನ್ನುಳಿದವರು ಆಡುತ್ತಿಲ್ಲ. ಹೀಗಾಗಿ ಐಪಿಎಲ್ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ನ ಕಳಪೆಗೆ ಹೇಗೆ ಕಾರಣವಾಗುತ್ತದೆ ಎಂದು ಪೀಟರ್ಸನ್ ಪ್ರಶ್ನೆ ಮಾಡುತ್ತಾರೆ.