ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಭರ್ಜರಿ ಸಿದ್ಧತೆ ಮಾಡುತ್ತಿದ್ದು, ನಾಯಕ ರೋಹಿತ್ ಶರ್ಮ ಕೂಡ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.
ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ಜೂ.7ರಿಂದ ಉಭಯ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದ್ದು, ಓವಲ್ ಮೈದಾನದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮ ವಿಶೇಷ ನೆನಪು ಹೊಂದಿದ್ದಾರೆ. ಚೊಚ್ಚಲ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮ, 2021ರಲ್ಲಿ ವಿದೇಶಿ ನೆಲದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕ ದಾಖಲಿಸಿದ್ದರು.
ಇಂಗ್ಲೆಂಡ್ ವಿರುದ್ಧ ನಡೆದ 4ನೇ ಟೆಸ್ಟ್ನ ದ್ವಿತೀಯ ಇನ್ನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮ, 127 ರನ್ಗಳಿಸಿ ಮಿಂಚಿದ್ದರು. ಹಿಟ್ ಮ್ಯಾನ್ನ ಈ ಇನ್ನಿಂಗ್ಸ್ನಲ್ಲಿ 14 ಬೌಂಡರಿ ಮತ್ತು 1 ಸಿಕ್ಸ್ ಒಳಗೊಂಡಿತ್ತು. ಇದೀಗ ಲಂಡನ್ನ ಇದೇ ಮೈದಾನಕ್ಕೆ ಬಂದಿರುವ ರೋಹಿತ್ ಶರ್ಮ, ಮಹತ್ವದ ಪಂದ್ಯದಲ್ಲಿ ಆಸೀಸ್ ತಂಡದ ಚಾಲೆಂಜ್ ಎದುರಿಸಲು ತಮ್ಮ ತಂಡದೊಂದಿಗೆ ಸಜ್ಜಾಗಿದ್ದಾರೆ.
ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ರೋಹಿತ್ ಶರ್ಮ ಈಗಾಗಲೇ ಅಭ್ಯಾಸ ಸಹ ಆರಂಭಿಸಿದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಪ್ರಶಸ್ತಿ ಗೆಲ್ಲಲು ಒಂದೇ ಮೆಟ್ಟಿಲು ಹಿಂದಿರುವ ಟೀಂ ಇಂಡಿಯಾಕ್ಕೆ ರೋಹಿತ್ ಶರ್ಮ ಯಾವ ರೀತಿಯಲ್ಲಿ ಆಸರೆಯಾಗುತ್ತಾರೆ ಎಂಬುದು ಹಿಟ್ ಮ್ಯಾನ್ ಫ್ಯಾನ್ಸ್ಗಳ ಜೊತೆಗೆ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹಾಗೂ ನಿರೀಕ್ಷೆ ಮೂಡಿಸಿದೆ.
Rohit Sharma, Team India, WTC Final, Australia, Sports Karnataka