ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ಗಳ ಸರಣಿಯನ್ನು ಭಾರತ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಇದರೊಂದಿಗೆ ರೋಹಿತ್ ನಾಯಕತ್ವದಲ್ಲಿ ಭಾರತಕ್ಕೆ ಇದು ಸತತ 14ನೇ ಜಯವಾಗಿದೆ. T-20 ಮತ್ತು ODI ನಂತರ, ರೋಹಿತ್ ನಾಯಕತ್ವದಲ್ಲಿ ಭಾರತ ಟೆಸ್ಟ್ ಸರಣಿಯಲ್ಲಿ ಗೆಲುವಿನೊಂದಿಗೆ ಪ್ರಾರಂಭಿಸಿದೆ.
ಅಕ್ಟೋಬರ್ನಲ್ಲಿ ವಿರಾಟ್ ಕೊಹ್ಲಿ ಟಿ 20 ನಾಯಕತ್ವವನ್ನು ತೊರೆದರು. ನಂತರ ರೋಹಿತ್ಗೆ ಟಿ 20 ನಾಯಕತ್ವವನ್ನು ನೀಡಲಾಯಿತು. ಕಳೆದ ವರ್ಷ ನವೆಂಬರ್ನಲ್ಲಿ ನಡೆದ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ ತಂಡ 3-0 ಅಂತರದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತ್ತು. ಅದರ ನಂತರ, ಅವರ ನಾಯಕತ್ವದಲ್ಲಿ, ಟೀಂ ಇಂಡಿಯಾ ಫೆಬ್ರವರಿಯಲ್ಲಿ ಭಾರತ ಪ್ರವಾಸದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಮೊದಲ 3 ODI ಗಳಲ್ಲಿ ಮತ್ತು ನಂತರ 3 T-20 ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.
CHAMPIONS #TeamIndia @Paytm #INDvSL pic.twitter.com/GhLlAl1H0W
— BCCI (@BCCI) March 14, 2022
ವೆಸ್ಟ್ ಇಂಡೀಸ್ ನಂತರ, ಶ್ರೀಲಂಕಾ ವಿರುದ್ಧದ 3 ಟಿ-20 ಸರಣಿ ಮತ್ತು ನಂತರ 2 ಟೆಸ್ಟ್ ಸರಣಿಯಲ್ಲಿ ಯಾವುದೇ ಪಂದ್ಯವನ್ನು ಸೋಲದೆ ಭಾರತ ತಂಡವು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ರೋಹಿತ್ ನಾಯಕತ್ವದಲ್ಲಿ ಮೊದಲ ಟೆಸ್ಟ್ ಸರಣಿಯನ್ನು ಗೆಲ್ಲುವುದರೊಂದಿಗೆ, ಭಾರತ ತಂಡವು ತವರಿನಲ್ಲಿ ಸತತ 15 ನೇ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತು. ನವೆಂಬರ್ 2012 ರಲ್ಲಿ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಸರಣಿಯನ್ನು ಭಾರತ ಕಳೆದುಕೊಂಡಿತ್ತು. ಆಗ ಮಹೇಂದ್ರ ಸಿಂಗ್ ಧೋನಿ ತಂಡದ ನಾಯಕರಾಗಿದ್ದರು. ಅಂದಿನಿಂದ ಭಾರತ ತಂಡ ತವರಿನ ಯಾವುದೇ ಟೆಸ್ಟ್ ಸರಣಿಯನ್ನು ಸೋತಿಲ್ಲ. ಇಲ್ಲಿಯವರೆಗೆ ಯಾವುದೇ ತಂಡಗಳು ತಮ್ಮ ತವರು ನೆಲದಲ್ಲಿ ಇಷ್ಟು ಸರಣಿಗಳನ್ನು ಗೆದ್ದಿಲ್ಲ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಮೂರನೇ ಬಾರಿಗೆ ಕ್ಲೀನ್ ಸ್ವೀಪ್ ಮಾಡಿದೆ. ಇದಕ್ಕೂ ಮೊದಲು 1993/94 ಮತ್ತು 2017 ರಲ್ಲಿ ಭಾರತವು 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾವನ್ನು 3-0 ಅಂತರದಿಂದ ಸೋಲಿಸಿತ್ತು.