ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ನಡುವಿನ ಬ್ಲಾಕ್ ಬಸ್ಟರ್ ಕದನ ಯಾವುದೇ ಅಡೆ ತಡೆ ಇಲ್ಲದೇ ನಿರ್ವಿಘ್ನವಾಗಿ ಆರಂಭವಾಗಿದೆ.
ಈ ಪಂದ್ಯದ ಮೂಲಕ ನಾಯಕ ರೋಹಿತ್ ಶರ್ಮಾ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.
ಪಾಕ್ ವಿರುದ್ಧ ಕಣಕ್ಕಿಳಿಯುವ ಮೂಲಕ ಹಿಟ್ ಮ್ಯಾನ್ ರೋಹಿತ್ ಶರ್ಮಾ ತಂಡದ ಮಾಜಿ ನಾಯಕ ಧೋನಿ ಅವರ ದಾಖಲೆಯನ್ನು ಮುರಿದಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಧೋನಿ 33 ಪಂದ್ಯಗಳನ್ನು ಆಡಿದ್ದಾರೆ. ಇದೀಗ ರೋಹಿತ್ ಶರ್ಮಾ ಟಿ20 ವಿಶ್ವಕಪ್ನಲ್ಲಿ 34ನೇ ಪಂದ್ಯ ಆಡಿ ಧೋನಿ ದಾಖೆಲೆಯನ್ನು ಮುರಿದಿದ್ದಾರೆ.
ಮಾಜಿ ಆಟಗಾರ ಯುವರಾಜ್ ಸಿಂಗ್ 31 ಪಂದ್ಯ, ಸುರೇಶ್ ರೈನಾ 26, ಮತ್ತು ರವೀಂದ್ರ ಜಡೇಜಾ 22, ಟಿ20 ವಿಶ್ವಕಪ್ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಟಾಪ್ 5 ಆಟಗಾರರಾಗಿದ್ದಾರೆ.

ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ ತಿಲಕರತ್ನೆ ದಿಲ್ಶಾನ್ ಟಿ20 ವಿಶ್ವಕಪ್ನಲ್ಲಿ 35 ಪಂದ್ಯಗಳನ್ನಾಡಿ ಮೊದಲ ಸ್ಥಾನದಲ್ಲಿದ್ದಾರೆ. ಪಾಕ್ ತಂಡದ ಬೂಮ್ ಬೂಮ್ ಖ್ಯಾತಿಯ ಶಾಹೀದ್ ಅಫ್ರೀದಿ 34 ಪಂದ್ಯಗಳ್ನನಾಡಿ ಎರಡನೆ ಸ್ಥಾನದಲ್ಲಿದ್ದಾರೆ.
2007ರ ಟಿ20 ವಿಶ್ವಕಪ್ನ ಆಟಗಾರರಾದ ದಿನೇಶ್ ಕಾರ್ತಿಕ್ ಮತ್ತು ರೋಹಿತ್ ಶರ್ಮಾ ಈ ಬಾರಿಯ ವಿಶ್ವಕಪ್ನಲ್ಲಿ ಆಡುತ್ತಿದ್ದಾರೆ.