ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ರಿಯಾನ್ ಪರಾಗ್, ಐಪಿಎಲ್ನಲ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ.
ಆರ್ಸಿಬಿ ವಿರುದ್ಧದ ಹಣಾಹಣಿಯಲ್ಲಿ ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್ನಲ್ಲೂ ಕಮಾಲ್ ಮಾಡಿದ ರಿಯಾನ್ ಪರಾಗ್, ಬ್ಯಾಟಿಂಗ್ನಲ್ಲಿ ಅಜೇಯ ಅರ್ಧಶತಕ ಸಿಡಿಸಿ, ಫೀಲ್ಡಿಂಗ್ನಲ್ಲಿ ಒಂದೇ ಪಂದ್ಯದಲ್ಲಿ ನಾಲ್ಕು ಕ್ಯಾಚ್ಗಳನ್ನು ಹಿಡಿದು ರಾಜಸ್ಥಾನ್ ಗೆಲುವಿನ ಹೀರೋ ಆಗಿ ಮಿಂಚಿದರು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ ಎನಿಸಿದರು.
ಬ್ಯಾಟಿಂಗ್ನಲ್ಲಿ ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದ ರಿಯಾನ್ ಪರಾಗ್(56*) ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ಆಪತ್ಭಾಂಧವನಾದರು. ಸಾಧಾರಣ ಮೊತ್ತ ಕಲೆಹಾಕಿದ್ದ ರಾಜಸ್ಥಾನ್ ತಂಡಕ್ಕೆ ಫೀಲ್ಡಿಂಗ್ನಲ್ಲೂ ಆಸರೆಯಾದ ಪರಾಗ್, 4 ಕ್ಯಾಚ್ ಹಿಡಿದು ಮಿಂಚಿದರು. ಆ ಮೂಲಕ ವಿರಾಟ್ ಕೊಹ್ಲಿ, ಶಹಬಾಜ್ ಅಹ್ಮದ್, ಸುಯಾಶ್ ಪ್ರಭುದೇಸಾಯಿ ಹಾಗೂ ಹರ್ಷಲ್ ಪಟೇಲ್ ವಿಕೆಟ್ ಪತನಕ್ಕೆ ಕಾರಣರಾದರು.
ರಿಯಾನ್ ಪರಾಗ್ ಅವರ ಈ ಆಲ್ರೌಂಡ್ ಪ್ರದರ್ಶನದಿಂದ ರಾಜಸ್ಥಾನ್ ರಾಯಲ್ಸ್, ಬ್ಯಾಟಿಂಗ್ನಲ್ಲಿ 144 ರನ್ಗಳ ಪೈಪೋಟಿ ಮೊತ್ತ ಕಲೆಹಾಕಿತು. ಈ ಸವಾಲು ಬೆನ್ನತ್ತಿದ ಆರ್ಸಿಬಿ, ಬ್ಯಾಟಿಂಗ್ ವೈಫಲ್ಯದಿಂದಾಗಿ 29 ರನ್ಗಳ ಹೀನಾಯ ಸೋಲುಕಂಡಿತು. ಅಲ್ಲದೇ ರಾಜಸ್ಥಾನ್ ಗೆಲುವಿನ ಹೀರೋ ಆಗಿ ಮಿಂಚಿದ ರಿಯಾನ್ ಪರಾಗ್, ಐಪಿಎಲ್ನಲ್ಲಿ ತಮ್ಮ ಚೊಚ್ಚಲ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
IPLನಲ್ಲಿ ಒಂದೇ ಪಂದ್ಯದಲ್ಲಿ 4 ಕ್ಯಾಚ್(ಭಾರತೀಯರು):
ಸಚಿನ್ ತೆಂಡುಲ್ಕರ್v ಕೆಕೆಆರ್, ಮುಂಬೈ (2008)
ರಾಹುಲ್ ತೆವಾಟಿಯಾ v ಎಂಐ, ಮುಂಬೈ (2019)
ರವೀಂದ್ರ ಜಡೇಜಾ v ಆರ್ಆರ್, ಮುಂಬೈ (2021)
ರಿಂಕು ಸಿಂಗ್ v ಜಿಟಿ, ನವಿ ಮುಂಬೈ (2022)
ರಿಯಾನ್ ಪರಾಗ್ v ಆರ್ಸಿಬಿ, ಪುಣೆ (2022)