ರಾಹುಲ್ ದ್ರಾವಿಡ್, ಧೋನಿ ದಾಖಲೆ ಅಳಿಸಿ ಹಾಕಿದ ರಿಷಬ್ ಪಂತ್
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ.
ಪರ್ಲ್ ನಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ ಅವರು ಆಕರ್ಷಕ 85 ರನ್ ದಾಖಲಿಸಿದ್ರು. ಇದರೊಂದಿಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ವಿಕೆಟ್ ಕೀಪರ್ ಗರಿಷ್ಠ ರನ್ ಪೇರಿಸಿದ ಮೊದಲ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ಹಿಂದೆ 2001ರಲ್ಲಿ ರಾಹುಲ್ ದ್ರಾವಿಡ್ ಅವರು ಡರ್ಬಾನ್ ನಲ್ಲಿ 77 ರನ್ ಸಿಡಿಸಿದ್ದರು. ಆಗ ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾದ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು.
ಇನ್ನು 2013ರಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಜೋಹಾನ್ಸ್ ಬರ್ಗ್ ನಲ್ಲಿ ಆಕರ್ಷಕ 65 ರನ್ ದಾಖಲಿಸಿದ್ರು.
ಹಾಗೇ 2003ರಲ್ಲಿ ರಾಹುಲ್ ದ್ರಾವಿಡ್ ಡರ್ಬಾನ್ ನಲ್ಲಿ 62 ರನ್ ಗಳಿಸಿದ್ದರು.
ಇದೀಗ ರಿಷಬ್ ಪಂತ್ ರಾಹುಲ್ ದ್ರಾವಿಡ್ ಮತ್ತು ಧೋನಿ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಎರಡನೇ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ ಅವರಿಗೆ ಶತಕ ದಾಖಲಿಸುವ ಅವಕಾಶವಿತ್ತು. ಆದ್ರೆ ಪಂತ್ ಅದನ್ನು ಕೈಚೆಲ್ಲಿಕೊಂಡು ಬಿಟ್ರು.
64ಕ್ಕೆ2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕೆ.ಎಲ್. ರಾಹುಲ್ ಅವರನ್ನು ಜೊತೆ ಸೇರಿಕೊಂಡ ರಿಷಬ್ ಪಂತ್ ಅತ್ಯುತ್ತಮವಾಗಿಯೇ ಬ್ಯಾಟ್ ಬೀಸಿದ್ರು. ಅಲ್ಲದೆ ಮೂರನೇ ವಿಕೆಟ್ ಗೆ 115 ರನ್ ಕೂಡ ಕಲೆ ಹಾಕಿದ್ದರು.
71 ಎಸೆತಗಳಲ್ಲಿ ಹತ್ತು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ ರಿಷಬ್ ಪಂತ್ 85 ರನ್ ಸಿಡಿಸಿದ್ರು. ಅಂತಿಮವಾಗಿ ಶಂಶಿ ಅವರ ಎಸೆತದಲ್ಲಿ ಮಕ್ರ್ರಾಮ್ ಅವರಿಗೆ ಕ್ಯಾಚ್ ನೀಡಿ ನಿರಾಸೆಯಿಂದಲೇ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ರು.