ನಿಕೊಲೊಸ್ ಪೂರಾನ್ ಅವರ ಸ್ಫೋಟಕ ಅರ್ಧ ಶತಕಕ್ಕೆ ತತ್ತರಿಸಿದ ಆರ್ಸಿಬಿ ಲಕ್ನೋ ವಿರುದ್ಧ 1 ವಿಕೆಟ್ಗಳ ವೀರೋಚಿತ ಸೋಲು ಅನುಭವಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಕಲೆ ಹಾಕಿತು. ಲಕ್ನೋ ತಂಡ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು.
213 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ಲಕ್ನೋ ತಂಡ ಆರಂಭದಲ್ಲೆ ಆಘಾತ ಅನುಭವಿಸಿತು. ಕೈಲೆ ಮೇಯರ್ಸ್ 0,ಕೆ.ಎಲ್.ರಾಹುಲ್ 18,ದೀಪಕ್ ಹೂಡಾ 9,ಕೃಣಾಲ್ ಪಾಂಡ್ಯ 0 ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಮಾರ್ಕಸ್ ಸ್ಟೋಯ್ನಿಸ್ 65, ನಿಕೊಲೊಸ್ ಪೂರಾನ್ 62, ಆಯೂಷ್ ಬದೋನಿ 30, ಜಯದೇವ್ ಉನಾದ್ಕತ್ 9,ಮಾರ್ಕ್ ವುಡ್ 1, ರವಿ ಬಿಷ್ಣೋಯಿ 3 ರನ್ ಗಳಿಸಿದರು.
ಆರ್ಸಿಬಿ ಪರ ಮೊಹ್ಮದ್ ಸಿರಾಜ್ 22ಕ್ಕೆ 3, ವಾಯ್ನೆ ಪಾರ್ನೆಲ್ 41ಕ್ಕೆ 3,ಹರ್ಷಲ್ ಪಟೇಲ್ 48ಕ್ಕೆ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ (61 ರನ್) ಹಾಗೂ ಫಾಫ್ ಡುಪ್ಲೆಸಿಸ್ (ಅಜೇಯ 79)ಮೊದಲ ವಿಕೆಟ್ಗೆ 96 ರನ್ ಸೇರಿಸಿದರು.ಗ್ಲೇನ್ ಮ್ಯಾಕ್ಸ್ ವೆಲ್ 59 ರನ್ ಹಾಗೂ ದಿನೇಶ್ ಕಾರ್ತಿಕ್ ಅಜೇಯ 1 ರನ್ ಗಳಿಸಿದರು.
ಲಕ್ನೊ ಪರ ಮಾರ್ಕ್ ವುಡ್ 32ಕ್ಕೆ 1, ಅಮಿತ್ ಮಿಶ್ರಾ 18ಕ್ಕೆ 1 ವಿಕೆಟ್ ಪಡೆದರು.