ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಆರ್ಸಿಬಿ ಇಂದು ಆತಿಥೇಯ ಲಖನೌ ತಂಡವನ್ನು ಎದುರಿಸಲಿದೆ.
ಸೋಮವಾರ ಇಲ್ಲಿನ ಏಕನಾ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್ಸಿಬಿ ಮತ್ತೊಂದು ಅಗ್ನಿ ಪರೀಕ್ಷೆ ಎದುರಿಸಲಿದೆ. ವಿರಾಟ್ ಕೊಹ್ಲಿ , ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ನೀಡಿದ ವೇಗವನ್ನು ತಂಡ ಕಳೆದ 8 ಪಂದ್ಯಗಳಿಂದ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ. ಲಖನೌ ವಿರುದ್ಧ ಮೊದಲ ಮುಖಾಮುಖಿಯಾಲ್ಲಿ ಆರ್ಸಿಬಿ ಸೋತಿತ್ತು.
ಬಹುತೇಕ ತಂಡಗಳು ಅಂಕಪಟ್ಟಿಯಲ್ಲಿ ಸನಿಹದಲ್ಲಿದಲ್ಲಿವೆ. ಎರಡನೆ ಅವಧಿಯಲ್ಲಿ ತಪ್ಪುಗಳು ಕಡಿಮೆಯಾಗಿವೆ.
ಪ್ರತಿ ಪಂದ್ಯದಲ್ಲೂ ವಿರಾಟ್ ಕೊಹ್ಲಿ, ನಾಯಕ ಫಾಫ್ ಡುಪ್ಲೆಸಿಸ್ ಹಾಗು ಗ್ಲೆನ್ ಮ್ಯಾಕ್ಸ್ವೆಲ್ಲ ಒಳ್ಳೆಯ ಪ್ರದರ್ಶನ ನೀಡಲು ಸಾಧ್ಯವಿಲ್ಲ. ತಂಡದ ಇತರೆ ಬ್ಯಾಟರ್ಗಳಾದ ಮಾಹಿಪಾಲ್ ಲೊಮ್ರೊರ್, ಶಹಬಾಜ್ ಅಹ್ಮದ್ ಮತ್ತು ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಜವಾಬ್ದಾರಿ ಹೊತ್ತುಕೊಳ್ಳಬೇಕಿದೆ.
ಫೀಲ್ಡಿಂಗ್ ಮತ್ತು ಕ್ಯಾಚಿಂಗ್ ವಿಭಾಗಗಳಲ್ಲಿ ಸುಧಾರಿಸಬೇಕಿದೆ. ಇದನ್ನು ಸ್ವತಃ ವಿರಾಟ್ ಕೊಹ್ಲಿ ಮೊನ್ನೆ ಕೋಲ್ಕತ್ತಾ ವಿರುದ್ಧದ ಪಂದ್ಯದ ನಂತರ ಹೇಳಿಕೊಂಡಿದ್ದರು.
ನಾಯಕ ಫಾಫ್ ಡುಪ್ಲೆಸಿಸ್ ಪೂರ್ಣ ಪ್ರಮಾಣದಲ್ಲಿ ಫಿಟ್ ಆಗುವವರೆಗೂ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ. ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
ಆರ್ಸಿಬಿಗೆ ಮೊಹ್ಮದ್ ಸಿರಾಜ್ ತಂಡದ ತಾರಾ ಬೌಲರ್ ಆಗಿದ್ದಾರೆ. ತಂಡದ ಇತರೆ ಬೌಲರ್ಗಳಿಂದ ಬೆಂಬಲ ನಿರೀಕ್ಷಿಸುತ್ತಿದ್ದಾರೆ. ಡೆತ್ ಓವರ್ ಸ್ಪೆಶಲಿಸ್ಟ್ ವೇಗಿ ಹರ್ಷಲ್ ಪಟೇಲ್ ಕಠಿಣ ಸಂದರ್ಭದಲ್ಲೂ ಎಕನಾಮಿ ರೇಟ್ ಅನ್ನು 9.94ಕ್ಕೆ ಇಳಿಸಬೇಕಿದೆ.
ಲಖನೌ ತಂಡ ಪಂಜಾಬ್ ವಿರುದ್ಧ `ಭರ್ಜರಿ ಗೆಲುವು ದಾಖಲಿಸಿದೆ. ಪಂಜಾಬ್ ವಿರುದ್ಧ ರನ್ ಹೊಳೆ ಹರಿಸಿದ ಲಖನೌಗೆ ಅಭ್ಯಾಸ ಪಂಧ್ಯವಾಗಿತ್ತು. ಕೈಲೆ ಮೇಯರ್ಸ್, ಮಾರ್ಕಸ್ ಸ್ಟೋಯ್ನಿಸ್ ಮತ್ತು ನಿಕೊಲೊಸ್ ಪೂರಾನ್ ಮುಂದೆ ಯಾವ ಮೊತ್ತಗಳು ಸುರಕ್ಷಿತವಲ್ಲ ಎಂಬುದು ಸಾಬೀತಾಗಿದೆ.
ನಾಯಕ ಕೆ.ಎಲ್.ರಾಹುಲ್ ತವರಿನಲ್ಲಿ ಆಡುತ್ತಿರುವುದರಿಂದ ಒತ್ತಡ ಎದುರಿಸುತ್ತಿದ್ದಾರೆ. ಪಿಚ್ ತವರಿನ ತಂಡಕ್ಕೆ ಲಾಭವಾಗದಂತೆ ಸಿದ್ಧಪಡಿಸಲಾಗಿದೆ.
ಮೊಹಾಲಿಯಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಲಖನೌ ಬ್ಯಾಟರ್ಗಳು ಅಬ್ಬರಿಸಿದರೂ ನಿಧಾನಗತಿಯ ಪಿಚ್ನಿಂದ ಪರದಾಡಿದ್ದಾರೆ. ಗುಜರಾತ್ ವಿರುದ್ಧ ತವರು ಅಂಗಳದಲ್ಲಿ 136 ರನ್ಗಳ ಸಾಧಾರಣ ಮೊತ್ತವನ್ನು ಚೇಸ್ ಮಾಡುವಲ್ಲಿ ರಾಹುಲ್ ಪಡೆ ವಿಫಲವಾಗಿತ್ತು.
ಲಖನೌ ಅಂಗಳದಲ್ಲಿ ಸ್ಪಿನ್ನರ್ಗಳು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ರವಿ ಬಿಷ್ಣೋಯಿ ಸ್ಪಿನ್ ವಿಭಾಗದ ಜವಾಬ್ದಾರಿ ಹೊತ್ತಿದ್ದು ಅಮಿತ್ ಮಿಶ್ರಾ ಒಳ್ಳೆಯ ಸಾಥ್ ನೀಡುತ್ತಿದ್ದಾರೆ. ವೇಗಿ ಮಾರ್ಕ್ ವುಡ್ ಅನುಪಸ್ಥಿತಿಯಲ್ಲಿ ಅ್ಘನ್ ವೇಗಿ ನವೀನ್ ಉಲ್ ಹಕ್ ಅಚ್ಚುಕಟ್ಟಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಪ್ರತಿ ಓವರ್ಗೆ 10 ರನ್ ನೀಡುತ್ತಿರುವ ಆವೇಶ್ ಖಾನ್ ದುಬಾರಿಯಾಗಿದ್ದು ಸುಧಾರಿಸಿಕೊಳ್ಳಬೇಕಿದೆ.