16ನೇ ಆವೃತ್ತಿಯ ಐಪಿಎಲ್ ನಲ್ಲೂ ಆರ್ಸಿಬಿಯ ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ನುಚ್ಚುನೂರಾಗಿದೆ. ಕಳೆದ ಮೂರು ಆವೃತ್ತಿಗಳಲ್ಲಿ ಪ್ಲೇ ಆಫ್ನಲ್ಲಿ ಎಡವಿದ್ದ ರಾಯಲ್ ಚಾಲೆಂಜರ್ಸ್ ಈ ಬಾರಿ ಗುಂಪು ಹಂತದಲ್ಲೆ ನಿರ್ಗಮಿಸಿದೆ.
ಟೈಟಾನ್ಸ್ ವಿರುದ್ದದ ಡು ಆರ್ ಡೈ ಮ್ಯಾಚ್ನಲ್ಲಿ 6 ವಿಕೆಟ್ ಗಳಿಂದ ಸೋತು ಟೂರ್ನಿಯಿಂದಲೇ ಹೊರಬಿದ್ದಿದೆ.
ಸನ್ ರೈಸರ್ಸ್ ವಿರುದ್ಧ ಮುಂಬೈ ಗೆದ್ದಿದ್ದರಿಂದ ಆರ್ಸಬಿ ತಂಡ ಗುಜರಾತ್ ಎದುರು ಗೆಲ್ಲಲೇಬೇಕಾದ ಅನಿವಾರ್ಯತೆಯನ್ನು ಎದುರಿಸಿತ್ತು. ವಿರಾಟ್ ಕೊಹ್ಲಿ ಅವರ ಶತಕದ ನೆರವಿನಿಂದ ಆರ್ ಸಿಬಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 197 ರನ್ ಕಲೆ ಹಾಕಿತು.
ಶುಭ್ಮನ್ ಗಿಲ್ ಅಜೇಯ 104 ರನ್ ನೆರೆವಿನಿಂದ ಗುಜರಾತ್ ತಂಡ 19.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 198 ರನ್ ಕಲೆ ಹಾಕಿತು.
198 ರನ್ ಗುರಿ ಬೆನ್ನತ್ತಿದ ಗುಜರಾತ್ಗೆ ಶುಭ್ಮನ್ ಗಿಲ್ ಮತ್ತು ವಿಜಯ್ ಶಂಕರ್ ಮೊದಲ ವಿಕೆಟ್ ಗೆ 123 ರನ್ ಜತೆಯಾಟ ನೀಡಿದರು. ನಂತರ 23 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡರೂ ಗಿಲ್ 5 ಎಸೆತ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮುನ್ನ ಆರ್ಸಿಬಿ ಪರ ಕೊಹ್ಲಿ 61 ಎಸೆತದಲ್ಲಿ 13 ಬೌಂಡರಿ 1 ಸಿಕ್ಸರ್ ನೊಂದಿಗೆ ಅಜೇಯ 101 ರನ್ ಕಲೆ ಹಾಕಿದರು. ಫಾಫ್ ಡುಪ್ಲೆಸಿಸ್ 28, ಮೈಕಲ್ ಬ್ರೇಸ್ ವೆಲ್ 26, ಅನೂಜ್ ರಾವತ್ ಅಜೇಯ 23 ರನ್ ಗಳಿಸಿದರು.