ಮತ್ತೆ ಗೆಲುವಿನ ಲಯಕ್ಕೆ ಮರಳಿದ ಚೆನ್ನೈ ಸೂಪರ್ ಕಿಂಗ್ಸ್ ಆರ್ಸಿಬಿ ವಿರುದ್ಧ 8 ರನ್ ಗಳ ರೋಚಕ ಗೆಲುವು ದಾಖಲಿಸಿದೆ.
ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟ 226 ರನ್ ಕಲೆ ಹಾಕಿತು.ಆರ್ಸಿಬಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟ್ಕೆ 218 ರನ್ ಗಳಿಸಿತು.
227 ರನ್ ಗುರಿ ಬೆನ್ನತ್ತಿದ ಆರ್ಸಿಬಿ ವಿರಾಟ್ ಕೊಹ್ಲಿ (6ರನ್) ಮತ್ತು ಮಹಿಪಾಲ್ ಲಮ್ರೊರೊರ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು. ಮೂರನೆ ವಿಕೆಟ್ಗೆ ಫಾಫ್ ಡುಪ್ಲಿಸ್ ಜತೆಗೂಡಿದ ಮ್ಯಾಕ್ಸ್ ವೆಲ್ ದಾಖಲೆಯ 126 ರನ್ಗಗಳ ಜತೆಯಾಟ ನೀಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಸಿಕ್ಸರ್ಗಳ ಸುರಿಮಳೆಗೈದ ಗ್ಲೆನ್ ಮ್ಯಾಕ್ಸವೆಲ್ (46 ಎಸೆತ 3 ಬೌಂಡರಿ, 8ಸಿಕ್ಸರ್) 24 ಎಸೆತದಲ್ಲಿ ಅರ್ಧ ಶತಕ ಪೂರೈಸಿದರು. ನಾಯಕ ಫಾಫ್ ಡುಪ್ಲೆಸಿಸ್ 23 ಎಸೆತದಲ್ಲಿ ಅರ್ಧ ಶತಕ ಪೂರೈಸಿದರು.
76 ರನ್ ಮುನ್ನಗುತ್ತಿದ್ದ ಮ್ಯಾಕ್ಸ್ ವೆಲ್ ಮಹೇಶ್ ತೀಕ್ಷ್ಣಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ನಂತರ ಬಂದ ಶಹಬಾಜ್ ಅಹ್ಮದ್ 12, ದಿನೇಶ್ ಕಾರ್ತಿಕ್ 28, ಸುಯೇಶ್ ಪ್ರಭುದೇಸಾಯಿ 19, ವಾಯ್ನೆ ಪಾರ್ನೆಲ್ 2, ವನಿಂದು ಹಸರಂಗ ಅಜೇಯ 2 ರನ್ ಗಳಿಸಿದರು. ಫಾಫ್ ಡುಪ್ಲೆಸಿಸ್ 62 ರನ್ ಹೊಡೆದು ಮೊಯಿನ್ ಅಲಿಗೆ ಬಲಿಯಾದರು.
ಚೆನ್ನೈ ಪರ ತುಷರಾ ದೇಶಪಾಂಡೆ 45ಕ್ಕೆ 3, ಮತೀಷಾ ಪಾರ್ತೀರಾಣಾ42ಕ್ಕೆ 2,ಆಕಾಶ್ ಸಿಂಗ್, ಮಹೇಶ್ ತೀಕ್ಷ್ಣ ಹಾಗೂ ಮೊಯಿನ್ ಅಲಿ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಚೆನ್ನೈ ತಂಡದ ಪರ ಋತುರಾಜ್ ಗಾಯಕ್ವಾಡ್ 3, ಡೆವೊನ್ ಕಾನ್ವೆ 83, ಅಜಿಕ್ಯ ರಹಾನೆ 37, ಶಿವಂ ದುಬೆ 52, ಅಂಬಾಟಿ ರಾಯ್ಡು 14, ಮೊಯಿನ್ ಅಲಿ 19, ರವೀಂದ್ರ ಜಡೇಜಾ 10, ಧೋನಿ ಅಜೇಯ 1 ರನ್ ಗಳಿಸಿದರು,
ಆರ್ಸಿಬಿ ಪರ ಸೀರಾಜ್, ಪಾರ್ನೆಲ್, ವಿಜಯ್ ಕುಮಾರ್ ವೈಶಾಕ್, ಮ್ಯಾಕ್ಸ್ ವೆಲ್, ವನಿಂದು ಹಸರಂಗ ಮತ್ತು ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು.