ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ ಆರಂಭದ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ.
ತಂಡದ ನಾಯಕಿ ಸ್ಮೃತಿ ಮಂಧನಾ, ರೇಣುಕಾ ಸಿಂಗ್, ರಿಚಾ ಘೋಷ್ ಮತ್ತು ಸೋಫಿ ಡಿವೈನ್ ಸಾಮಾಜಿಕ ಜಾಲತಾಣದಲ್ಲಿ ಹೊಸ ಜೆರ್ಸಿಯೊಂದಿಗೆ ಇರುವ ಫೋಟೋವನ್ನು ಆರ್ಸಿಬಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.
ಹೊಸ ಜೆರ್ಸಿಯಲ್ಲಿ ಸಾಂಪ್ರದಾಯಿಕ ಕೆಂಪುಬಣ್ಣ ಮತ್ತು ಕಪ್ಪು ಬಣ್ಣವನ್ನು ಹೊಂದಿದೆ. ಆರ್ಸಿಬಿಗೆ ಡ್ರೀಮ್ 11 ಮತ್ತು ಪೂಮಾ ಪ್ರಾಯೋಜಕರಾಗಿದ್ದಾರೆ.
ಪುರುಷರ ಜೆರ್ಸಿಗಿಂತ ಮಹಿಳೆಯರ ಜರ್ಸಿ ಹೆಚ್ಚು ಗಮನ ಸೆಳೆಯುತ್ತದೆ. ಜರ್ಸಿಯ ಮೇಲ್ಬಾಗ ಕಪ್ಪು ಬಣ್ಣದಿಂದ ಕೂಡಿದ್ದು ಕೆಳಗಿನ ಭಾಗ ಕೆಂಪು ಬಣ್ಣ ಹೊಂದಿದೆ.
ಆರ್ಸಿಬಿ ಸ್ಮೃತಿ ಮಂಧನಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದೆ. ಹರಾಜಿನಲ್ಲಿ ದಾಖಲೆಯ 3.40 ಕೋಟಿ ರೂ.ಗೆ ಆರ್ಸಿಬಿ ಅವರನ್ನು ಖರೀದಿಸಿತು.
ತಂಡದಲ್ಲಿ ಸೋಫಿ ಡಿವೈನ್, ಎಲ್ಲಿಸ್ಸಿ ಪೆರ್ರಿ, ರೇಣುಕಾ ಸಿಂಗ್, ರಿಚಾ ಘೋಷ್, ಹೀಥರ್ ನೈಟ್, ಎರಿನ್ ಬರ್ನ್ಸ್ ಮತ್ತು ಡಾನ್ ವಾನ್ ನೀಕೆರಕ್ ಅವರಂತಹ ತಾರಾ ಆಟಗಾರ್ತಿಯರಿದ್ದಾರೆ.