IPL 2022 RCB schedule- ಆರ್ ಸಿಬಿ ವೇಳಾಪಟ್ಟಿಯ ಫುಲ್ ಡಿಟೇಲ್ಸ್…!

15ನೇ ಆವೃತ್ತಿಯ ಐಪಿಎಲ್ ವೇಳಾಪಟ್ಟಿ ಬಿಡುಗಡೆಯಾಗಿದೆ. ಮಾರ್ಚ್ 26ರಿಂದ ಮೇ 29ರವರೆಗೆ 2022ರ ಐಪಿಎಲ್ ಹಬ್ಬ ನಡೆಯಲಿದೆ. ಮೊದಲ ಪಂದ್ಯ ಹಾಗೂ ಅಂತಿಮ ಫೈನಲ್ ಪಂದ್ಯ ಮುಂಬೈನಲ್ಲಿ ನಡೆಯಲಿದೆ.
ಅಂದ ಹಾಗೇ ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ನಿರೀಕ್ಷೆಗಳು ಏನು ಕಮ್ಮಿಯಾಗಿಲ್ಲ. ಈ ಬಾರಿಯೂ ಕಪ್ ನಮ್ದೆ ಅಂತ ಅಭಿಮಾನಿಗಳು ಅಭಿಮಾನದಿಂದ ಹೇಳುತ್ತಿದ್ದಾರೆ.
ಇನ್ನು ಆರ್ ಸಿಬಿ ತಂಡ 15ನೇ ಐಪಿಎಲ್ ನಲ್ಲಿ ಮಾರ್ಚ್ 26 ರಿಂದ ತನ್ನ ಅಭಿಯಾನವನ್ನು ಶುರು ಮಾಡಲಿದೆ. ಲೀಗ್ ನಲ್ಲಿ 14 ಪಂದ್ಯಗಳನ್ನು ಆಡಲಿದೆ. ಲೀಗ್ ನ ಮೊದಲ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ದ ಆಡಿದ್ರೆ, ಲೀಗ್ ನ ಕೊನೆಯ ಪಂದ್ಯವನ್ನು ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಕೆಕೆಆರ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ತಲಾ ಒಂದೊಂದು ಪಂದ್ಯಗಳನ್ನು ಆಡಲಿದೆ. ಇನ್ನುಳಿದಂತೆ ರಾಜಸ್ತಾನ ರಾಯಲ್ಸ್, ಪಂಜಾಬ್ ಕಿಂಗ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್ ರೈಸರ್ಸ್ ಹೈದ್ರಬಾದ್ ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧ ತಲಾ ಎರಡು ಬಾರಿ ಆರ್ ಸಿಬಿ ತಂಡ ಆಡಲಿದೆ. RCB IPL 2022 schedule, timings, dates and venues

ಪಂದ್ಯ ಸಂಖ್ಯೆ 03. ಭಾನುವಾರ ಮಾರ್ಚ್ 27 – PBKS vs RCB 7:30 PM DY ಪಾಟೀಲ್ ಸ್ಟೇಡಿಯಂ
ಪಂದ್ಯ – ಸಂಖ್ಯೆ 06. ಬುಧವಾರ ಮಾರ್ಚ್ 30 – RCB vs KKR 7:30 PM DY ಪಾಟೀಲ್ ಸ್ಟೇಡಿಯಂ
ಪಂದ್ಯ ಸಂಖ್ಯೆ 13. ಮಂಗಳವಾರ ಏಪ್ರಿಲ್ 5 – RR vs RCB 7:30 PM ವಾಂಖೆಡೆ ಸ್ಟೇಡಿಯಂ
ಪಂದ್ಯ ಸಂಖ್ಯೆ 18. ಶನಿವಾರ ಏಪ್ರಿಲ್ 9 – RCB vs MI 7:30 PM MCA ಸ್ಟೇಡಿಯಂ, ಪುಣೆ
ಪಂದ್ಯ ಸಂಖ್ಯೆ 22. ಮಂಗಳವಾರ ಏಪ್ರಿಲ್ 12 – CSK vs RCB 7:30 PM DY ಪಾಟೀಲ್ ಸ್ಟೇಡಿಯಂ
ಪಂದ್ಯ ಸಂಖ್ಯೆ 27. ಶನಿವಾರ ಏಪ್ರಿಲ್ 16 – DC vs RCB 7:30 PM ವಾಂಖೆಡೆ ಸ್ಟೇಡಿಯಂ
ಪಂದ್ಯ ಸಂಖ್ಯೆ 31. ಮಂಗಳವಾರ ಏಪ್ರಿಲ್ 19 – LSG vs RCB 7:30 PM DY ಪಾಟೀಲ್ ಸ್ಟೇಡಿಯಂ
ಪಂದ್ಯ ಸಂಖ್ಯೆ 36. ಶನಿವಾರ ಏಪ್ರಿಲ್ 23 – RCB vs SRH 7:30 PM ಬ್ರಬೋರ್ನ್ – CCI
ಪಂದ್ಯ ಸಂಖ್ಯೆ 39. ಮಂಗಳವಾರ ಏಪ್ರಿಲ್ 26 – RCB ವಿರುದ್ಧ RR 7:30 PM MCA ಸ್ಟೇಡಿಯಂ, ಪುಣೆ
ಪಂದ್ಯ ಸಂಖ್ಯೆ 43. ಶನಿವಾರ ಏಪ್ರಿಲ್ 30 – GT vs RCB 3:30 PM ಬ್ರಬೋರ್ನ್ – CCI
ಪಂದ್ಯ ಸಂಖ್ಯೆ 49. ಬುಧವಾರ ಮೇ 4 – RCB vs CSK 7:30 PM MCA ಸ್ಟೇಡಿಯಂ, ಪುಣೆ
ಪಂದ್ಯ ಸಂಖ್ಯೆ 54. ಭಾನುವಾರ ಮೇ 8 – SRH vs RCB 3:30 PM ವಾಂಖೆಡೆ ಸ್ಟೇಡಿಯಂ
ಪಂದ್ಯ ಸಂಖ್ಯೆ 60. ಶುಕ್ರವಾರ ಮೇ 13 – RCB vs PBKS 7:30 PM ಬ್ರಬೋರ್ನ್ – CCI
ಪಂದ್ಯ ಸಂಖ್ಯೆ 67. ಗುರುವಾರ ಮೇ 19 – RCB ವಿರುದ್ಧ GT 7:30 PM ವಾಂಖೆಡೆ ಸ್ಟೇಡಿಯಂ