ಯಶ್ ದುಬೆ(133), ಶುಭಂ ಶರ್ಮ(116) ಹಾಗೂ ರಜತ್ ಪಟಿದಾರ್(122) ಮೊದಲ ಇನ್ನಿಂಗ್ಸ್‌ನಲ್ಲಿ ಗಳಿಸಿದ ಅದ್ಭುತ ಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದಿಂದ ಬಲಿಷ್ಠ ಮುಂಬೈ ತಂಡವನ್ನ ಮಣಿಸಿದ ಮಧ್ಯ ಪ್ರದೇಶ ಚೊಚ್ಚಲ ರಣಜಿ ಟ್ರೋಫಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದ 5ನೇ ಕೊನೆಯ ದಿನವಾದ ಭಾನುವಾರ ನಡೆದ ದಿನದಾಟದಲ್ಲಿ ಮುಂಬೈ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 269 ರನ್‌ಗಳಿಗೆ ರನ್‌ಗಳಿಗೆ ಆಲೌಟ್ ಆಯಿತು. ಪರಿಣಾಮ ಪಂದ್ಯದ ಗೆಲುವಿಗೆ 108 ರನ್‌ಗಳ ಟಾರ್ಗೆಟ್ ಪಡೆದ ಮಧ್ಯಪ್ರದೇಶ, 29.5 ಓವರ್‌ಗಳಲ್ಲಿ 108/4 ರನ್‌ಗಳಿಸಿ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಆ ಮೂಲಕ 2022-23ನೇ ಸಾಲಿನ ರಣಜಿ ಟ್ರೋಫಿ ಪ್ರಶಸ್ತಿ ಗೆದ್ದು ಚಾಂಪಿಯನ್‌ಪಟ್ಟಕ್ಕೇರಿತು.

ನಾಲ್ಕನೇ ದಿನದಂತ್ಯಕ್ಕೆ ಕಲೆಹಾಕಿದ್ದ 113/2 ರನ್‌ಗಳಿಂದ ದಿನದಾಟ ಆರಂಭಿಸಿದ ಮುಂಬೈ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಅರ್ಮಾನ್ ಜಾಫರ್(37) ರನ್‌ಗಳಿಸಿ ಔಟಾದರೆ. ಸುವೇದ್ ಪರ್ಕಾರ್(51) ಅರ್ಧಶತಕ ಸಿಡಿಸಿ ವಿಕೆಟ್ ಒಪ್ಪಿಸಿದರು. ನಂತರ ಕಣಕ್ಕಿಳಿದ ಸರ್ಫರಾಜ್ ಖಾನ್(45) ರನ್‌ಗಳ ಉತ್ತಮ ಕಾಣಿಕೆ ನೀಡಿ ಹೊರನಡೆದರು. ಆದರೆ ನಂತರದಲ್ಲಿ ಬಂದ ಯಾವುದೇ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಿದ ಪರಿಣಾಮ ಮುಂಬೈ 2ನೇ ಇನ್ನಿಂಗ್ಸ್‌ನಲ್ಲಿ 269 ರನ್‌ಗಳಿಗೆ ಆಲೌಟ್ ಆಗುವ ಮೂಲಕ 107 ರನ್‌ಗಳ ಸಾಧಾರಣ ಮುನ್ನಡೆ ಸಾಧಿಸಿತು. ಮಧ್ಯಪ್ರದೇಶ ಪರ ಕುಮಾರ್ ಕಾರ್ತಿಕೇಯ 4 ವಿಕೆಟ್ ಪಡೆದು ಮಿಂಚಿದರೆ, ಯಾದವ್ ಹಾಗೂ ಶಹಾನಿ ತಲಾ 2 ವಿಕೆಟ್ ಪಡೆದರು.

ಮುಂಬೈ ನೀಡಿದ 108 ರನ್‌ಗಳ ಸಾಧಾರಣ ಟಾರ್ಗೆಟ್ ಬೆನ್ನತ್ತಿದ ಮಧ್ಯಪ್ರದೇಶ ಆರಂಭದಲ್ಲೇ ಯಶ್ ದುಬೆ(1) ವಿಕೆಟ್ ಕಳೆದುಕೊಂಡು ಆಘಾತ ಕಂಡಿತು. ನಂತರ ಜೊತೆಯಾದ ಹಿಮಾಂಶು ಮಂತ್ರಿ(37) ಮತ್ತು ಶುಭಂ ಶರ್ಮ(30) 52 ರನ್ ಜೊತೆಯಾಟವಾಡಿ ಚೇತರಿಕೆ ನೀಡಿದರು. ನಂತರ ಬಂದ ಪಾರ್ಥ್ ಶಹಾನಿ(5) ರನ್‌ಗಳಿಸಿ ಪೆವಿಲಿಯನ್ ಸೇರಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ರಜತ್ ಪಟಿದಾರ್(30*) ರನ್‌ಗಳಿಸುವ ಮೂಲಕ ತಂಡವನ್ನ ಗೆಲುವಿನ ದಡಸೇರಿಸಿದರು. ಮುಂಬೈ ಪರ ಮುಲಾನಿ 3 ಹಾಗೂ ಕುಲಕರ್ಣಿ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಮುಂಬೈ: 374 ಮತ್ತು 269
ಮಧ್ಯಪ್ರದೇಶ: 536 ಮತ್ತು 108/4
ಪಂದ್ಯ ಶ್ರೇಷ್ಠ: ಶುಭಂ ಎಸ್.ಶರ್ಮ
ಸರಣಿ ಶ್ರೇಷ್ಠ: ಸರ್ಫರಾಜ್ ಖಾನ್