Sakibul Gani – ಚೊಚ್ಚಲ ಪಂದ್ಯದಲ್ಲೆ ತ್ರಿ ಶತಕ… ವಿಶ್ವ ದಾಖಲೆ ಬರೆದ ಬಿಹಾರದ ಸಕಿಬುಲ್ ಗನಿ..!

22ರ ಹರೆಯದ ಬಿಹಾರದ ಸಕಿಬುಲ್ ಗನಿ ಅವರು ತನ್ನ ಚೊಚ್ಚಲ ರಣಜಿ ಪಂದ್ಯದಲ್ಲೇ ತ್ರಿ ಶತಕ ದಾಖಲಿಸಿದ್ದಾರೆ. ಈ ಮೂಲಕ ವಿಶ್ವ ಕ್ರಿಕೆಟ್ ನಲ್ಲಿ ಪ್ರಥಮ ದರ್ಜೆಯ ಚೊಚ್ಚಲ ಪಂದ್ಯದಲ್ಲೇ ತ್ರಿ ಶತಕ ದಾಖಲಿಸಿದ ಮೊದಲ ಬ್ಯಾಟ್ಸ್ ಮೆನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೊಲ್ಕತ್ತಾದ ಜಾದವ್ಪುರ ಯುನಿವರ್ಸಿಟಿ ಕ್ಯಾಂಪಸ್ ನಲ್ಲಿ ನಡೆದ ರಣಜಿ ಪ್ಲೇಟ್ ಗುಂಪಿನ ಪಂದ್ಯದಲ್ಲಿ ಸಕಿಬುಲ್ ಅವರು ಮಿಜೋರಾಮ್ ವಿರುದ್ದ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ವಿಶ್ವ ದಾಖಲೆ ಬರೆದಿದ್ದಾರೆ.
ಸಕಿಬುಲ್ ಅವರು ಆಕರ್ಷಕ 341 ರನ್ ಸಿಡಿಸಿದ್ದಾರೆ. ಇದರಲ್ಲಿ ಎರಡು ಸಿಕ್ಸರ್ ಹಾಗೂ 56 ಬೌಂಡಿಗಳಿದ್ದವು. ಈ ಮಹೋನ್ನತ ಇನಿಂಗ್ಸ್ ನಲ್ಲಿ ಸಕಿಬುಲ್ ಗನಿ ಅವರು 405 ಎಸೆತಗಳನ್ನು ಎದುರಿಸಿದ್ದರು. Ranji Trophy 2022: Bihar batter Sakibul Gani scripts world record with a triple hundred
ಅಷ್ಟೇ ಅಲ್ಲ, ಸಕಿಬುಲ್ ಅವರು ಮತ್ತೊಂದು ದಾಖಲೆಯನ್ನು ಅಳಿಸಿ ಹಾಕಿದ್ದಾರೆ. 2018-19ರ ರಣಜಿ ಟೂರ್ನಿಯಲ್ಲಿ
ಮಧ್ಯ ಪ್ರದೇಶದ ಅಜಯ್ ರೊಹೆರಾ ತನ್ನ ಚೊಚ್ಚಲ ಪಂದ್ಯದಲ್ಲಿ ಹೈದ್ರಬಾದ್ ವಿರುದ್ಧ 267 ರನ್ ಸಿಡಿಸಿದ್ದರು. ಇದು ರಣಜಿ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ದಾಖಲಿಸಿದ್ದ ಗರಿಷ್ಠ ಸ್ಕೊರ್ ಆಗಿತ್ತು. ಈ ದಾಖಲೆಯನ್ನು ಸಕಿಬುಲ್ ಈಗ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ.
ಮತ್ತೊಂದೆಡೆ, ಸಕಿಬುಲ್ ಅವರು ನಾಲ್ಕನೇ ವಿಕೆಟ್ ಗೆ ಬಬುಲ್ ಕುಮಾರ್ ಜೊತೆ ಸೇರಿ 538 ರನ್ ಕಲೆ ಹಾಕಿದ್ದರು. ಬಬುಲ್ ಕುಮಾರ್ ಕೂಡ ದ್ವಿಶತಕ ದಾಖಲಿಸಿದ್ದರು. ಹಾಗೇ ನೋಡಿದ್ರೆ ಮಿಜೋರಾಂ ವಿರುದ್ದ ಬಿಹಾರ ತಂಡ ಒಂದು ಹಂತದಲ್ಲಿ 71 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಸಕಿಬುಲ್ ಮತ್ತು ಬಬುಲ್ ಕುಮಾರ್ ಅಮೋಘ ಆಟವನ್ನಾಡಿ ತಂಡದ ಬೃಹತ್ ಮೊತ್ತಕ್ಕೂ ಕಾರಣರಾದ್ರು.