ರಣಜಿ: ತಮಿಳುನಾಡು ವಿರುದ್ಧ ಎರಡನೇ ಇನಿಂಗ್ಸ್‍ನಲ್ಲಿ 7 ವಿಕೆಟ್ ಪಡೆದ ಜಡೇಜಾ
ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ರಣಜಿ ಟ್ರೋಫಿ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 8 ವಿಕೆಟ್ ಪಡೆದಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಅವರು ಕೇವಲ ಒಂದು ವಿಕೆಟ್ ಪಡೆದಿದ್ದರು. ಆದರೆ, ಎರಡನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಪಡೆದು ತಮಿಳುನಾಡು ತಂಡವನ್ನು 133 ರನ್ ಗಳಿಗೆ ಆಲೌಟ್ ಮಾಡಿದರು. ಅವರು ರಣಜಿ ಟ್ರೋಫಿ ಪಂದ್ಯಗಳಲ್ಲಿ ಸೌರಾಷ್ಟ್ರ ತಂಡದ ನಾಯಕರಾಗಿದ್ದಾರೆ.
ಕೊನೆಯ ದಿನ ಅವರ ತಂಡದ ಗೆಲುವಿಗೆ 262 ರನ್‌ಗಳ ಅಗತ್ಯವಿದೆ. ಗಾಯದ ಸಮಸ್ಯೆಯಿಂದಾಗಿ ಜಡೇಜಾ ಕಳೆದ ವರ್ಷ ಆಗಸ್ಟ್‌ನಿಂದ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಇದೀಗ ರಣಜಿ ಪಂದ್ಯದ ನಂತರ ಅವರ ಫಿಟ್ನೆಸ್ ಪರೀಕ್ಷೆ ನಡೆಯಲಿದೆ. ಅವರು ಫಿಟ್ ಆಗಿದ್ದರೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಆಡಲಿದ್ದಾರೆ. ಫೆಬ್ರವರಿ 1 ರಂದು ಅವರ ಫಿಟ್ನೆಸ್ ಬಗ್ಗೆ ಬಿಸಿಸಿಐ ನಿರ್ಧಾರ ತೆಗೆದುಕೊಳ್ಳಲಿದೆ.
ಗಾಯದ ಕಾರಣ 6 ತಿಂಗಳ ಕಾಲ ಆಡಿರಲಿಲ್ಲ
ಮೊಣಕಾಲಿನ ಗಾಯದಿಂದಾಗಿ ಕಳೆದ ವರ್ಷ ಆಗಸ್ಟ್‌ನಿಂದ ಆಲ್‌ರೌಂಡರ್ ಜಡೇಜಾ ಭಾರತಕ್ಕಾಗಿ ಕ್ರಿಕೆಟ್ ಆಡಿಲ್ಲ. ರವೀಂದ್ರ ಜಡೇಜಾ ಕೊನೆಯ ಬಾರಿಗೆ ಭಾರತಕ್ಕಾಗಿ 31 ಆಗಸ್ಟ್ 2022 ರಂದು ಹಾಂಗ್ ಕಾಂಗ್ ವಿರುದ್ಧ T20 ಪಂದ್ಯವನ್ನು ಆಡಿದ್ದರು. ಈಗ ರಣಜಿಯಲ್ಲಿ ಕಾಣಿಸಿಕೊಂಡಿದ್ದಾರೆ.

53 ರನ್ ನೀಡಿ 7 ವಿಕೆಟ್
ಮೊದಲ ಇನಿಂಗ್ಸ್‌ನಲ್ಲಿ ಅವರು ಕೇವಲ ಒಂದು ವಿಕೆಟ್ ಪಡೆದಿದ್ದರು. ಆದರೆ ಎರಡನೇ ಇನ್ನಿಂಗ್ಸ್ ನಲ್ಲಿ 53 ರನ್ ಗೆ 7 ವಿಕೆಟ್ ಪಡೆದು ತಮಿಳುನಾಡು ತಂಡವನ್ನು 133 ರನ್ ಗೆ ಆಲೌಟ್ ಮಾಡಿದರು. ಶುಕ್ರವಾರ ಪಂದ್ಯದ ಕೊನೆಯ ದಿನವಾಗಿದೆ. ಸೌರಾಷ್ಟ್ರ ಗೆಲುವಿಗೆ 262 ರನ್‌ಗಳ ಅಗತ್ಯವಿದೆ.

ಫೆಬ್ರವರಿ 1 ರಂದು ಫಿಟ್ನೆಸ್ ನಿರ್ಧಾರ
ಎನ್‌ಸಿಎಯಲ್ಲಿ ಜಡೇಜಾ ಅವರ ಫಿಟ್‌ನೆಸ್ ಟೆಸ್ಟ್ ನಡೆಯಲಿದೆ. ಅಲ್ಲದೆ ಈ ವರದಿ ಫೆಬ್ರವರಿ 1 ರೊಳಗೆ ಬರಲಿದ್ದು, ಅವರ ಆಟದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ. ಫೆಬ್ರವರಿ 9 ರಿಂದ ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧದ 4 ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಭಾರತ ಆಡಬೇಕಿದೆ. ಆ ಸರಣಿಗೆ ಜಡೇಜಾ ಕೂಡ ಟೀಮ್ ಇಂಡಿಯಾದ ಭಾಗವಾಗಿದ್ದಾರೆ.
Ranji, Tamil Nadu, Saurashtra, Ravindra Jadeja, wicket