ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಅಂಡರ್ 19 ತಂಡದಿಂದ ಹಿಡಿದು ರಣಜಿ ತಂಡದ ತನಕ ಒಂದೇ ತಂಡದಲ್ಲಿ ಆಡಿದ್ದರು. ಅಷ್ಟೇ ಅಲ್ಲ ಈ ಬೆಸ್ಟ್ ಫ್ರೆಂಡ್ಸ್, ಟೀಮ್ ಇಂಡಿಯಾದಲ್ಲೂ ಜೊತೆಯಾಗಿದ್ದರು. ಕಳೆದ ವರ್ಷದ ತನಕ ಪಂಜಾಬ್ ಕಿಂಗ್ಸ್ ಗೆ ರಾಹುಲ್ ನಾಯಕನಾಗಿ, ಮಯಾಂಕ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದರು. ಈಗ ರಾಹುಲ್ ಲಖನೌ ಸೂಪರ್ ಜೈಂಟ್ಸ್ ನಾಯಕ. ಮಯಾಂಕ್ ಪಂಜಾಬ್ ಕಿಂಗ್ಸ್ ಕ್ಯಾಪ್ಟನ್. ಎರಡೂ ತಂಡಗಳು ಮುಖಾಮುಖಿ ಆಗುತ್ತಿರುವುದರಿಂದ ಇಬ್ಬರು ನಾಯಕರ ರಣತಂತ್ರಗಳು ಕುತೂಹಲಕಾರಿಯಾಗಿದೆ.
ಪಂಜಾಬ್ ಕಿಂಗ್ಸ್, ಓಪನರ್ ಶಿಖರ್ ಧವನ್ ಕನಿಷ್ಠ 16 ಓವರ್ ಗಳ ತನಕ ಇನ್ನಿಂಗ್ಸ್ ಕಟ್ಟಬೇಕು ಎಂದು ಪ್ಲಾನ್ ಮಾಡಿದೆ. ಮತ್ತೊಂದು ಕಡೆಯಲ್ಲಿ ಲಖನೌ ಸೂಪರ್ ಜೈಂಟ್ಸ್ ಧವನ್ಗಾಗಿ ತನ್ನ ಅಸ್ತ್ರವನ್ನು ಸಿದ್ಧಮಾಡಿಕೊಂಡಿದೆ. ಲಖನೌ ವೇಗಿ ದುಷ್ಮಂತ್ ಚಾಮಿರಾ ಶಿಖರ್ ಅವರನ್ನು 2 ಬಾರಿ ಔಟ್ ಮಾಡಿರುವುದರಲ್ಲದೆ 25 ಎಸೆತಗಳಲ್ಲಿ ಕೇವಲ 30 ರನ್ ಮಾತ್ರ ನೀಡಿದ್ದಾರೆ.
ಶಿಖರ್ ಧವನ್ ರನ್ನು ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿರುವ ಸ್ಪಿನ್ನರ್ ಕೃನಾಲ್ ಪಾಂಡ್ಯಾ ಮತ್ತು ರವಿ ಬಿಷ್ಣೋಯಿ ಇಲ್ಲಿ ತನಕ ಒಮ್ಮೆಯೂ ಔಟ್ ಮಾಡಿಲ್ಲ. ಪಾಂಡ್ಯಾ ವಿರುದ್ಧ ಧವನ್ 26 ಎಸೆತಗಳಲ್ಲಿ 29 ರನ್ ಗಳಿಸಿದ್ದರೆ, ಬಿಷ್ಣೋಯಿ ವಿರುದ್ಧ 19 ಎಸೆತಗಳಲ್ಲಿ 36 ರನ್ ಸಿಡಿಸಿದ್ದಾರೆ.
ಮನೀಷ್ ಪರದಾಟ
ಮನೀಷ್ ಪಾಂಡೆ ಈ ಬಾರಿಯ ಐಪಿಎಲ್ ನಲ್ಲಿ ಸಾಕಷ್ಟು ಪರದಾಡಿದ್ದಾರೆ, 6 ಇನ್ನಿಂಗ್ಸ್ ಗಳಲ್ಲಿ ಮನೀಷ್ ಕೇವಲ 88 ರನ್ ಬಾರಿಸಿದ್ದಾರೆ. ಲಖನೌ ಮನನ್ ವೋಹ್ರಾ ರನ್ನು ಮನೀಷ್ ಸ್ಥಾನದಲ್ಲಿ ಆಡಿಸಬಹುದು. ಆಯುಷ್ ಬಡೋನಿ ಅಥವಾ ಕೃಷ್ಣಪ್ಪ ಗೌತಮ್ ರನ್ನು ಕೂಡ 3ನೇ ಕ್ರಮಾಂಕಕ್ಕೆ ಭಡ್ತಿ ನೀಡುವ ಅವಕಾಶ ಲಖನೌ ಸೂಪರ್ ಜೈಂಟ್ಸ್ ತಂಡಕ್ಕಿದೆ.
ನಂಬರ್ ಗೇಮ್:
- ಐಪಿಎಲ್ 2022ರಲ್ಲಿ ರಾಹುಲ್ ಅತ್ಯತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ವೇಗ ಮತ್ತು ಸ್ಪಿನ್ ಮುಂದೆ ರಾಹುಲ್ ಸ್ಟ್ರೈಕ್ ರೇಟ್ 145ರಷ್ಟಿದೆ. ಜೋಸ್ ಬಟ್ಲರ್ ಮತ್ತು ಡೇವಿಡ್ ಮಿಲ್ಲರ್ ಮಾತ್ರ ರಾಹುಲ್ ಗಿಂತ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದಾರೆ.
- ಕಗಿಸೋ ರಬಾಡ ವಿರುದ್ಧ ಕ್ವಿಂಟಾನ್ ಡಿ ಕಾಕ್ 61 ಎಸೆತಗಳಲ್ಲಿ 89 ರನ್ ಸಿಡಿಸಿದ್ದಾರೆ. ಅಷ್ಟೇ ಅಲ್ಲ ಒಂದೇ ಒಂದು ಬಾರಿ ಔಟ್ ಕೂಡ ಆಗಿಲ್ಲ. ಆದರೆ ಅರ್ಷ್ ದೀಪ್ 14 ಎಸೆತಗಳಲ್ಲಿ 14 ರನ್ ನೀಡಿ ಡಿ ಕಾಕ್ ರನ್ನು 2 ಬಾರಿ ಔಟ್ ಮಾಡಿದ್ದಾರೆ.
- 5 ಅಥವಾ ಅದಕ್ಕಿಂತ ಹೆಚ್ಚು ಓವರ್ ಗಳನ್ನು ಡೆತ್ ಓವರ್ ನಲ್ಲಿ ಬೌಲಿಂಗ್ ಮಾಡಿದ ಬೌಲರ್ ಗಳ ಪೈಕಿ ಅರ್ಷದೀಪ್ 5.66 ಎಕಾನಮಿ ಹೊಂದಿದ್ದಾರೆ.
- ಕೆ.ಎಲ್. ರಾಹುಲ್ದ, ರಾಹುಲ್ ಚಹರ್ ವಿರುದ್ಧ 35 ಎಸೆಗಳಲ್ಲಿ 36 ರನ್ ಸಿಡಿಸಿದ್ದಾರೆ. ಒಮ್ಮೆ ಔಟ್ ಕೂಡ ಆಗಿದ್ದಾರೆ. ಆದರೆ ಮಾರ್ಕಸ್ ಸ್ಟೋಯ್ನಿಸ್ ಚಹರ್ ವಿರುದ್ಧ 12 ಎಸೆತಗಳಲ್ಲಿ ಒಮ್ಮೆಯೂ ಔಟಾಗದೆ 32 ರನ್ ಸಿಡಿಸಿದ್ದಾರೆ.
- ಪಂಜಾಬ್ ಕಿಂಗ್ಸ್ ಆಡಿರುವ 8 ಪಂದ್ಯಗಳ ಪೈಕಿ 7 ರಲ್ಲಿ ಟಾಸ್ ಸೋತಿದೆ.