ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ದೇಶಿಯ ರಣಜಿ ಟೂರ್ನಿಯಲ್ಲಿ ರನ್ ಕಲೆಹಾಕುವ ವಿಫಲರಾಗಿದ್ದಾರೆ. ಆಡಿದ ಮೊದಲ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಶತಕ ಬಾರಿಸಿ ಭರವಸೆ ಮೂಡಿಸಿದ್ದ ರಹಾನೆ ನಿರಾಸೆ ಅನುಭವಿಸಿದ್ದಾರೆ.
ಗೋವಾ ವಿರುದ್ಧದ ರಣಜಿ ಟೂರ್ನಿಯ ಎರಡನೇ ಪಂದ್ಯದಲ್ಲಿ ಮುಂಬೈ ಪರ ಬ್ಯಾಟ್ ಮಾಡಿದ ರಹಾನೆ, 3 ಎಸೆತಗಳನ್ನು ಎದುರಿಸಿ ಶೂನ್ಯ ಸುತ್ತಿದ್ದಾರೆ.

ಸೌರಾಷ್ಟ್ರ ವಿರುದ್ಧದ ಮೊದಲ ಪಂದ್ಯದಲ್ಲಿ ಅಜಿಂಕೆ ರಹನೆ ಸೊಗಸಾದ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದ್ದರು. ಇವರ ಇನ್ನಿಂಗ್ಸ್ನಲ್ಲಿ 17 ಬೌಂಡರಿ ಹಾಗೂ ಎರಡು ಸಿಕ್ಸರ್ ಗಳು ಸೇರಿವೆ. ಇದೇ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಚೇತೇಶ್ವರ್ ಪೂಜಾರ 91 ರನ್ ಗಳನ್ನು ಬಾರಿಸಿ ಎಲ್ಲರ ಗಮನಸೆಳೆದಿದ್ದರು.
ಪೂಜಾರ, ಎರಡನೇ ಪಂದ್ಯದಲ್ಲೂ ರನ್ ಕಲೆ ಹಾಕುವಲ್ಲಿ ಎಡವಿದ್ದಾರೆ. ಒಡಿಶಾ ವಿರುದ್ಧ ಎಲೈಟ್ ಡಿ ಗುಂಪಿನ ಪಂದ್ಯದಲ್ಲಿ ಸೌರಾಷ್ಟ್ರ ಪರ ಬ್ಯಾಟ್ ಮಾಡಿದ ಪೂಜಾರಿ ಎಂಟು ರನ ಗಳಿಗೆ ಆಟ ಮುಗಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಟೆಸ್ಟ್ ತಂಡದಿಂದ ಹೊರಗುಳಿದಿದ್ದ ಇವರು ರಣಜಿ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಮತ್ತೆ ಅಂತರ್ರಾಷ್ಟ್ರೀಯ ತಂಡಕ್ಕೆ ಮರಳಬೇಕಿದೆ. ಆದರೆ ಈ ಬ್ಯಾಟ್ಸ್ಮನ್ಗಳು ಎರಡನೇ ಪಂದ್ಯದಲ್ಲಿ ರನ್ ಕಲೆಹಾಕಿದ ಇರುವುದು ಚಿಂತೆಯನ್ನು ಮೂಡಿಸಿದೆ.