21 ಬಾರಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ಸ್ಪೇನ್ ನ ರಾಫೆಲ್ ನಡಾಲ್ ವಿಂಬಲ್ಡನ್ ನ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಕೆಟ್ಟ ಹವಾಮಾನದಿಂದ ಪ್ರಭಾವಿತವಾದ ಪಂದ್ಯದಲ್ಲಿ ನಡಾಲ್ 6-4, 6-4, 4-6, 6-3 ರಿಂದ ರಿಕಾರ್ಡೋಸ್ ಬೆರಾಂಕಿಸ್ ಅವರನ್ನು ಸೋಲಿಸಿದರು.
ನಡಾಲ್ ಎರಡು ಸೆಟ್‌ಗಳಿಂದ ಮುನ್ನಡೆಯಲ್ಲಿದ್ದಾಗ, ಕೆಟ್ಟ ಹವಾಮಾನದಿಂದಾಗಿ ಪಂದ್ಯವನ್ನು ಮಧ್ಯದಲ್ಲಿ ನಿಲ್ಲಿಸಬೇಕಾಯಿತು. ಪಂದ್ಯ ನಿಂತಾಗ ನಡಾಲ್ 6-4, 6-4, 4-6, 3-0 ಅಂತರದಲ್ಲಿ ಮುನ್ನಡೆಯಲ್ಲಿದ್ದರು.

ನಡಾಲ್ ಮೊದಲ ಎರಡು ಸೆಟ್‌ಗಳನ್ನು ಗೆದ್ದಿದ್ದರು. ಆದರೆ ಮೂರನೇ ಸೆಟ್‌ನಲ್ಲಿ ಬೆರಾಂಕಿಸ್ ಭರ್ಜರಿ ಪ್ರರ್ದಶನ ನೀಡಿ ಗಮನ ಸೆಳೆದರು. ಈ ಹಿನ್ನಡೆಯಿಂದ ಚೇತರಿಸಿಕೊಂಡ ನಡಾಲ್ ಕೊನೆಯ ಸೆಟ್ ನಲ್ಲಿ ಬಲಿಷ್ಠ ಪುನರಾಗಮನ ಮಾಡಿದರು. ಪಂದ್ಯವನ್ನು ನಿಲ್ಲಿಸಬೇಕಾದಾಗ ನಡಾಲ್ 3-0 ಮುನ್ನಡೆಯಲ್ಲಿದ್ದರು. ಮೊದಲ 13 ಪಾಯಿಂಟ್‌ಗಳಲ್ಲಿ 12 ಅನ್ನು ಗೆದ್ದ ನಂತರ ಅವರು 3-0 ಮುನ್ನಡೆ ಸಾಧಿಸಿದರು. ಪಂದ್ಯ ಪುನ: ಆರಾರಂಭವಾದಾಗ ನಡಾಲ್ ಕೊನೆಯ ಸೆಟ್ ಅನ್ನು 6-3 ಅಂತರದಲ್ಲಿ ಗೆದ್ದು ಪಂದ್ಯವನ್ನು ಗೆದ್ದರು.