ಟೀಂ ಇಂಡಿಯಾದ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾರತದ ಅತ್ಯಂತ ಯಶಸ್ವಿ ಬೌಲರ್ಗಳಲ್ಲಿ ಒಬ್ಬರು. ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ಮಾತ್ರವಲ್ಲದೆ ವೈಟ್ ಬಾಲ್ ಕ್ರಿಕೆಟ್ನಲ್ಲಿಯೂ ಸಹ ಬ್ಯಾಟ್ಸ್ಮನ್ಗಳಿಗೆ ಸಾಕಷ್ಟು ಕಾಟ ನೀಡುತ್ತಾರೆ. ಈ ಬಾರಿ ಅಶ್ವಿನ್ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ನ ಭಾಗವಾಗಿದ್ದಾರೆ. ಮಂಗಳವಾರ ಆರ್ಸಿಬಿ ವಿರುದ್ಧ ನಡೆದ ಪಂದ್ಯದಲ್ಲೂ ಅಶ್ವಿನ್ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದು, ಈ ಪಂದ್ಯದಲ್ಲಿ ಅಶ್ವಿನ್ ಹಲವು ವಿಶೇಷ ದಾಖಲೆಗಳನ್ನು ಮಾಡಿದ್ದಾರೆ.
ಆರ್ ಅಶ್ವಿನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ 4 ಓವರ್ಗಳಲ್ಲಿ 4.25 ಎಕಾನಮಿಯಲ್ಲಿ 17 ರನ್ಗಳಿಗೆ 3 ವಿಕೆಟ್ ಪಡೆದರು. ರಜತ್ ಪಾಟಿದಾರ್, ಶಹಬಾಜ್ ಅಹ್ಮದ್ ಮತ್ತು ಸುಯಶ್ ಪ್ರಭುದೇಸಾಯಿ ಅವರನ್ನು ಅಶ್ವಿನ್ ಔಟ್ ಮಾಡಿದರು. ಇದರೊಂದಿಗೆ ಆರ್ ಅಶ್ವಿನ್ ಇದೀಗ ಟಿ20 ಕ್ರಿಕೆಟ್ ನಲ್ಲಿ 271 ವಿಕೆಟ್ ಕಬಳಿಸಿದ್ದು, ಟಿ20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಅಶ್ವಿನ್ ಪಿಯೂಷ್ ಚಾವ್ಲಾ ಅವರನ್ನು ಹಿಂದಿಕ್ಕಿದ್ದಾರೆ. ಪಿಯೂಷ್ ಚಾವ್ಲಾ 270 ಟಿ20 ವಿಕೆಟ್ಗಳನ್ನು ಪಡೆದಿದ್ದಾರೆ.
ಈ ಪಂದ್ಯದಲ್ಲಿ ಆರ್ ಅಶ್ವಿನ್ ಲೆಜೆಂಡರಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ದಾಖಲೆಯನ್ನೂ ಮುರಿದಿದ್ದಾರೆ. ಅಶ್ವಿನ್ ಇದೀಗ ಐಪಿಎಲ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಫ್ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಶ್ವಿನ್ ಹೆಸರಿನಲ್ಲಿ ಒಟ್ಟು 152 ವಿಕೆಟ್ಗಳು ಉರುಳಿವೆ. ಅವರು ಹರ್ಭಜನ್ ಸಿಂಗ್ ಅವರ 150 ವಿಕೆಟ್ಗಳ ದಾಖಲೆಯನ್ನು ಅಳಿಸಿದ್ದಾರೆ. ಆರ್ ಅಶ್ವಿನ್ ಐಪಿಎಲ್ನಲ್ಲಿ 150ಕ್ಕೂ ಹೆಚ್ಚು ವಿಕೆಟ್ ಪಡೆದ ಭಾರತದ ಆರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಐಪಿಎಲ್ನಲ್ಲಿ 150 ವಿಕೆಟ್ ಪಡೆದ ಭಾರತೀಯ ಬೌಲರ್ಗಳು
ಅಮಿತ್ ಮಿಶ್ರಾ 166 ವಿಕೆಟ್
ಪಿಯೂಷ್ ಚಾವ್ಲಾ 157 ವಿಕೆಟ್
ಯುಜ್ವೇಂದ್ರ ಚಹಾಲ್ 157 ವಿಕೆಟ್
ಭುವನೇಶ್ವರ್ ಕುಮಾರ್ 151 ವಿಕೆಟ್
ಹರ್ಭಜನ್ ಸಿಂಗ್ 150 ವಿಕೆಟ್
ಆರ್ ಅಶ್ವಿನ್ 152 ವಿಕೆಟ್
ಆರ್ ಅಶ್ವಿನ್ ಐಪಿಎಲ್ 2022 ರಲ್ಲಿ ರಾಜಸ್ಥಾನ್ ರಾಯಲ್ಸ್ನ ತಂಡದ ಪರ ಆಡುತ್ತಿದ್ದಾರೆ. ಅವರನ್ನು ತಂಡವು ಮೆಗಾ ಹರಾಜಿನಲ್ಲಿ 5 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು. ರಾಜಸ್ಥಾನ ತಂಡ ಈ ಋತುವಿನಲ್ಲಿ ಆರ್ ಅಶ್ವಿನ್ ಅವರ ಅನುಭವದ ಸಂಪೂರ್ಣ ಲಾಭವನ್ನು ಪಡೆಯುತ್ತಿದೆ ಮತ್ತು ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ. ಅಶ್ವಿನ್ ಈ ಋತುವಿನಲ್ಲಿ ಇದುವರೆಗೆ 8 ಪಂದ್ಯಗಳನ್ನು ಆಡಿದ್ದು, 7.19 ರ ಏಕನಾಮಿಯಲ್ಲಿ 7 ವಿಕೆಟ್ ಪಡೆದಿದ್ದಾರೆ.