ಅಗ್ರ ಆಟಗಾರ ಆ್ಯಂಡಿ ಮರ್ರೆ ಕತಾರ್ ಓಪನ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದಾರೆ.
35 ವರ್ಷದ ಆ್ಯಂಡಿ ಮರ್ರೆ ಜೂನ್ ನಂತರ ಇದೇ ಮೊದಲ ಬಾರಿಗೆ ಎಟಿಪಿ ಫೈನಲ್ ತಲುಪಿದ್ದಾರೆ. ಫೈನಲ್ ಪಂದ್ಯದಲ್ಲಿ ತಾರಾ ಆಟಗಾರ ಡೇನಿಯಲ್ ಮೆಡ್ ಡೇವ್ ಅವರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ನಲ್ಲಿ ಆ್ಯಂಡಿ ಮರ್ರೆ ಎದುರಾಳಿ ಜಿರಿ ಲೆಹೆಸಿಕಾ 6-0, 3-6, 7-6 (6) ಅಂಕಗಳಿಂದ ಮಣಿಸಿದರು.
ಮರ್ರೆ ಕುರಿತು ಮೆಡೆಡೇವ್ ಅವರೊಬ್ಬ ದಂತಕತೆ.ಅವರು ಇಂದು ಗೆದ್ದ ರೀತಿ ನಂಬುಲು ಆಗುತ್ತಿಲ್ಲ ಎಂದಿದ್ದಾರೆ.
ಮೂರು ಬಾರಿ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಆಗಿರುವ ಆ್ಯಂಡಿ ಮರ್ರೆ,
ಎರಡು ಬಾರಿ ಸೊಂಟ ನೋವಿಗೆ ಗುರಿಯಾಗಿ ಶಸ್ತ್ರ ಚಿಕಿತ್ಸಗೆ ಒಳಪಟ್ಟಿದ್ದಾರೆ.
ನಿರ್ಣಾಯಕ ಸೆಟ್ ನಲ್ಲಿ ಮರ್ರೆ 5-3 ಹಿನ್ನಡೆಯಿಂದ ಮರು ಹೋರಾಟ ನೀಡಿ ಹೊರ ಬಂದರು. ಎರಡು ಮ್ಯಾಚ್ ಅಂಕಗಳನ್ನು ಕಾಪಾಡಿಕೊಂಡರು.