Pro Kabaddi: ರೋಚಕ ಪಂದ್ಯ ಗೆದ್ದ ಯು-ಮುಂಬಾ
ಗುಮನ್ ಹಾಗು ಸುರೇಂದ್ರ ಸಿಂಗ್ ಅವರ ಅದ್ಭುತ ಪ್ರದರ್ಶನದ ಬಲದಿಂದ ಯು-ಮುಂಬಾ 9ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯ 30ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿತು.
ಉತ್ತಮ ರೀತಿಯಲ್ಲಿ ಆಲ್ ರೌಂಡರ್ ಪ್ರದರ್ಶನ ತೋರಿದ ಯು ಮುಂಬಾ ತಂಡ ಹರಿಯಾಣ ಸ್ಟೀಲರ್ಸ್ ವಿರುದ್ಧ ಪ್ರಥಮಾರ್ಧದಲ್ಲಿ 17-15 ಅಂತರದಲ್ಲಿ ಮುನ್ನಡೆ ಸಾಧಿಸಿತು. ಹಿಂದಿನ ಪಂದ್ಯದಲ್ಲಿ ಸೋಲನುಭವಿಸಿದ್ದ ಹರಿಯಾಣ ಸ್ಟೀಲರ್ಸ್ ಗೆಲ್ಲುವ ಛಲದೊಂದಿಗೆ ಅಂಗಣಕ್ಕಿಳಿದಿತ್ತು. ಆರಂಭದಲ್ಲಿ ಬೃಹತ್ ಹಿನ್ನಡೆ ಕಂಡಿದ್ದರೂ ಸರ್ವಾಂಗೀಣ ಪದರ್ಶನ ತೋರಿ ಉತ್ತಮ ಪೈಪೋಟಿ ನೀಡಿ ಅಂತರವನ್ನು ಕಡಿಮೆ ಮಾಡಿಕೊಂಡಿತು, ಕೇವಲ ಆಲೌಟ್ ಆಗಿರುವುದೇ ಅಂಕದಲ್ಲಿನ ಅಂತರಕ್ಕೆ ಕಾರಣವಾಯಿತು.
ಗುಮಾನ್ ಸಿಂಗ್ ರೈಡಿಂಗ್ನಲ್ಲಿ ಗಳಿಸಿದ 9 ಅಂಕ ಹಾಗೂ ನಾಯಕ ಸುರೀಂದರ್ ಸಿಂಗ್ ಟ್ಯಾಕಲ್ನಲ್ಲಿ ಗಳಿಸಿದ 6 ಅಂಕ ಪಂದ್ಯದ ಗತಿಯನ್ನೇ ಬದಲಾಯಿಸಿತು. ಉತ್ತಮ ಪೈಪೋಟಿ ನೀಡಿಸದರೂ ಹರಿಯಾಣ ಸ್ಟೀಲರ್ಸ್ ಕೇವಲ ಒಂದು ಅಂಕದಿಂದ ಪಂದ್ಯವನ್ನು ಕೈ ಚೆಲ್ಲಿತು. ಹಿರಿಯಾಣ ಸ್ಟೀಲರ್ಸ್ ಪರ ಸ್ಟಾರ್ ರೈಡರ್ ಕೇಲವ 4 ಅಂಕ ಗಳಿಸಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಈ ಜಯದೊಂದಿಗೆ ಯು ಮುಂಬಾ ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಿಗಿಯಿತು. ಸೋಲುಂಡ ಹರಿಯಾಣ ಸ್ಟೀಲರ್ಸ್ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿಯಿತು.
Pro kabaddi, U Mumba, Haryana Steelers