Pro kabaddi: ಜೈಪುರ್ ಜಯದ ಓಟಕ್ಕೆ ಬ್ರೇಹ್ ಹಾಕಿದ ಪುಣೇರಿ ಪಲ್ಟನ್
ಪ್ರೊ ಕಬಡ್ಡಿ ಲೀಗ್ 2022 ರ 38 ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ 32-24 ಅಂತರದಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಢವನ್ನು ಮಣಿಸಿ, ಇದರೊಂದಿಗೆ ಸತತ ಐದು ಪಂದ್ಯಗಳಲ್ಲಿ ಜಯಭೇರಿ ಬಾರಿಸುತ್ತಿರುವ ಜೈಪುರದ ವಿಜಯದ ಓಟಕ್ಕೆ ಪುಣೇರಿ ಬ್ರೇಕ್ ಹಾಕಿದೆ. ಪುಣೇರಿ ತಂಡಕ್ಕೆ ಇದು ಸತತ ನಾಲ್ಕನೇ ಗೆಲುವು.
ಪಂದ್ಯದ ಆರಂಭ ತುಂಬಾ ನಿಧಾನವಾಗಿತ್ತು. ಮೊದಲ 10 ನಿಮಿಷದಲ್ಲಿ ಉಭಯ ತಂಡಗಳು ಅತ್ಯಂತ ಎಚ್ಚರಿಕೆಯಿಂದ ಆಟವಾಡಿದವು. ಇದಾದ ನಂತರ ಎರಡೂ ತಂಡಗಳು ಅವಕಾಶಗಳನ್ನು ಪಡೆದುಕೊಳ್ಳಲು ಆರಂಭಿಸಿದವು. 19ನೇ ನಿಮಿಷದವರೆಗೂ ಉಭಯ ತಂಡಗಳ ನಡುವೆ ಹೆಚ್ಚಿನ ವ್ಯತ್ಯಾಸ ಕಂಡುಬರಲಿಲ್ಲ, ಆದರೆ ಕೊನೆಯ ನಿಮಿಷದಲ್ಲಿ ಪುಣೇರಿ ಎದುರಾಳಿ ತಂಡವನ್ನು ಆಲೌಟ್ ಮಾಡಿದ್ದರಿಂದ 16-11 ಮುನ್ನಡೆ ಸಾಧಿಸಿತು. ವಿರಾಮದ ಮೊದಲು ಪುಣೇರಿ ಒಂದು ಅಂಕ ಗಳಿಸಿತು. ಇದರೊಂದಿಗೆ ಮೊದಲಾರ್ಧದಲ್ಲಿ ಪುಣೇರಿ ಆರು ಅಂಕಗಳ ಮುನ್ನಡೆ ಸಾಧಿಸಿತ್ತು.

ಜೈಪುರದ ರಕ್ಷಣೆಯು ಕಳಪೆಯಾಗಿತ್ತು ಮತ್ತು ಸಾಹುಲ್ ಕುಮಾರ್ ಐದು ವಿಫಲ ಟ್ಯಾಕಲ್‌ಗಳನ್ನು ಮಾಡಿದರು. ತಂಡದ ಸ್ಟಾರ್ ರೈಡರ್ ಅರ್ಜುನ್ ದೇಶ್ವಾಲ್ ಕೂಡ ಕಳಪೆಯಾಗಿ ಆಡಿದರು.
ದ್ವಿತೀಯಾರ್ಧದಲ್ಲಿ ಜೈಪುರ ತಂಡ ಕಮ್ ಬ್ಯಾಕ್ ಮಾಡಲು ಸಾಕಷ್ಟು ಪ್ರಯತ್ನಿಸಿದರೂ ಪುಣೇರಿ ತಂಡದ ರಕ್ಷಣಾ ಪಡೆ ಅವಕಾಶ ನೀಡಲಿಲ್ಲ. ಅಸ್ಲಾಮ್ ರೈಡಿಂಗ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದರು ಮತ್ತು ಅವರ ಸೂಪರ್ 10 ಅನ್ನು ಪೂರ್ಣಗೊಳಿಸಿದರು. ದ್ವಿತೀಯಾರ್ಧದಲ್ಲಿ, ಅರ್ಜುನ್ ಹಿಂತಿರುಗಿ ತನ್ನ ಆಟವನ್ನು ಮೊದಲಾರ್ಧಕ್ಕಿಂತ ಉತ್ತಮವಾಗಿ ಆಡಿದರು. ಆದರೆ ಇದರ ಹೊರತಾಗಿಯೂ ಅವರು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಜೈಪುರದ ಡಿಫೆನ್ಸ್ ತಂಡ ಪದೇ ಪದೇ ತಪ್ಪುಗಳನ್ನು ಮಾಡಿದ್ದರಿಂದ ಪುಣೇರಿ ಲಾಭ ಪಡೆಯಿತು.
Pro kabaddi, Puneri Paltan, Jaipur Pink Panthers