Pro Kabaddi: ವಾರಿಯರ್ಸ್ ಸವಾಲು ಮೀರಿದ ಪಲ್ಟನ್
ನಾಯಕ ಫಜಲ್ ಅತ್ರಚಲಿ ಅವರ ಅದ್ಭುತ ಟ್ಯಾಕಲ್ ಸಾಧನೆಯ ನೆರವಿನಿಂದ ಪುಣೇರಿ ಪಲ್ಟನ್ ತಂಡ ಬೆಂಗಾಲ್ ವಾರಿಯರ್ಸ್ ವಿರುದ್ಧ 27-25 ಅಂಕಗಳ ಅಂತರದಲ್ಲಿ ಮಣಿಸಿತು.
ನಾಯಕ ಮಣಿಂದರ್ ಸಿಂಗ್ ಅವರ ರೈಡಿಂಗ್ ಹಾಗೂ ಗಿರೀಶ್ ಮಾರುತಿ ಅವರ ಟ್ಯಾಕಲ್ ನೆರವಿನಿಂದ ಬೆಂಗಾಲ್ ವಾರಿಯರ್ಸ್ ತಂಡ ಪುಣೇರಿ ಪಲ್ಟನ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 15-11 ಅಂತರದಲ್ಲಿ ಮುನ್ನಡೆ ಕಂಡಿದೆ, ಪುಣೇರಿ ಪಲ್ಟನ್ ಪರ ಮೋಹಿತ್ ಗೊಯತ್ ರೈಡಿಂಗ್ನಲ್ಲಿ 4 ಅಂಕ ಗಳಿಸಿ ತಂಡದ ದಿಟ್ಟ ಹೋರಾಟಕ್ಕೆ ನೆರವಾದರು. ಹಿನ್ನಡೆ ಕಂಡಿದ್ದ ಬೆಂಗಾಲ್ ವಾರಿಯರ್ಸ್ಗೆ ಮನೋಜ್ ಗೌಡ 4 ಅಂಕಗಳನ್ನು ಗಳಿಸಿ ತಂಡದ ಮುನ್ನಡೆಗೆ ನೆರವಾದರು.
ಹಿಂದಿನ ಪಂದ್ಯದಲ್ಲಿ ಸೋಲನುಭವಿಸಿದ್ದ ಬೆಂಗಾಲ್ ವಾರಿಯರ್ಸ್ಗೆ ಇಲ್ಲಿ ಜಯದ ಅಗತ್ಯವಿದೆ, ಅದೇ ರೀತಿಯಲ್ಲಿ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದು ಗಮನಾರ್ಹ. ಪುಣೇರಿ ಪಲ್ಟನ್ ಪರ ಮೋಹಿತ್ ಗೊಯತ್ ರೈಡಿಂಗ್ನಲ್ಲಿ 4 ಅಂಕ ಗಳಿಸಿದ್ದನ್ನು ಹೊರತುಪಡಿಸಿದರೆ ಉಳಿದ ಆಟಗಾರರು ಗಮನಾರ್ಹ ಪ್ರದರ್ಶನ ತೋರಿಲ್ಲ.
ಫಜಲ್ ಅತ್ರಚಲಿ ಅಮೂಲ್ಯ 6 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ರೈಡಿಂಗ್ನಲ್ಲಿ ಅಸ್ಲಾಮ್ ಇನಾಮ್ದಾರ್ (5) ಹಾಗೂ ಮೋಹಿತ್ ಗೊಯತ್ (4) ಸಮಯೋಚಿತ ಪ್ರದರ್ಶನ ತೋರಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಟ್ಯಾಕಲ್ನಲ್ಲಿ ಸೋಮ್ಬೀರ್ ಸಿಂಗ್ 5 ಅಂಕಗಳನ್ನು ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಬೆಂಗಾಲ್ ವಾರಿಯರ್ಸ್ ಪರ ನಾಯಕ ಮಣಿಂದರ್ ಸಿಂಗ್ ರೈಡಿಂಗ್ನಲ್ಲಿ 6 ಹಾಗೂ ಗಿರೀಶ್ ಮಾರುತಿ ಟ್ಯಾಕಲ್ನಲ್ಲಿ 4 ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.
pro kabaddi, The Warriors are an unchallenged platoon
Pro kabaddi, Puneri Paltan, Bengal Warriors