ದೇಶದಲ್ಲಿ ಮಹಿಳಾ ಮಹಿಳಾ ಕ್ರೀಡಾಪಟುಗಳಿಗೆ ಶುಕ್ರದೇಸೆ ಆರಂಭವಾಗಿದೆ. ಇತ್ತೀಚೆಗಷ್ಟೆ ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್ ಆರಂಭವಾಗಿದೆ. ಇದೀಗ ಮಹಿಳಾ ಕಬಡ್ಡಿ ಪ್ರೀಮಿಯರ್ ಲೀಗ್ ಆರಂಭಗಲಿದೆ.
ಪ್ರೊ ಕಬಡ್ಡಿ ಲೀಗ್ ಆಯೋಜಕರಾದ ಮಾಷಲ್ ಸ್ಪೋರ್ಟ್ಸ್ ವೃತ್ತಿಪರ ಮಹಿಳಾ ಕಬಡ್ಡಿ ಲೀಗ್ ಆರಂಭಿಸುವುದಾಗಿ ಘೋಷಿಸಿದ್ದಾರೆ. ಮಹಿಳಾ ಕಬಡ್ಡಿ ಲೀಗ್ ಎಂದು ಹೆಸರಿಡಲಾಗುತ್ತದೆ ಎಂದು ತಿಳಿದು ಬಂದಿದೆ.
ಸದ್ಯ ಪ್ರೊ ಕಬಡ್ಡಿ ಲೀಗ್ 10ನೇ ವರ್ಷದ ಆವೃತ್ತಿ ನಡೆಯಲಿದೆ. ಮಹಿಳೆಯರ ಮೊದಲ ವರ್ಷದ ಆವೃತ್ತಿಯಲ್ಲಿ ಎಷ್ಟು ತಂಡಗಳಿರುತ್ತವೆ ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
2016ರಲ್ಲಿ ಪ್ರೊ ಕಬಡ್ಡಿ ಲೀಗ್ ಆಯೋಜಕರು ಮಹಿಳಾ ಕಬಡ್ಡಿ ಚಾಲೆಂಜ್ ಆಯೋಜಸಿದ್ದರು. ಫೈಯರ್ ಬರ್ಡ್ಸ್, ಐಸ್ ದಿವಸ್ ಮತ್ತು ಸ್ಟೋರ್ಮ್ಸ್ ಕಿಂಗ್ಸ್ ತಂಡಗಳನ್ನು ಆಡಿಲಾಗಿತ್ತು.
ಪುರುಷರ ಲೀಗ್ ನಲ್ಲಿ ನಾವು ಕಂಡ ಯಶಸ್ಸಿನ ಆಧಾರದ ಮೇಲೆ ಮತ್ತು ವಿಶ್ವ ಮಟ್ಟದಲ್ಲಿ ಕಬಡ್ಡಿ ಆಧುನಿಕ ಕ್ರೀಡೆಯಾಗಿ ಬೆಳವಣಿಗೆ ಆಧಾರದ ಮೇಲೆ ನಮ್ಮ ಬದ್ಧತೆ ನಿಂತಿರುವುದಾಗಿ ಮಾಷಲ್ ಸ್ಪೋರ್ಟ್ಸ್ ನ ಸಿಇಒ ಅನುಪಮ್ ಗೋಸ್ವಾಮಿ ತಿಳಿಸಿದ್ದಾರೆ.