Pro Kabaddi: ಪ್ಯಾಂಥರ್ಸ್ ಗೆ ಅಗ್ರ ಪಟ್ಟ
ತೆಲುಗು ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 27-51 ಅಂತರದಲ್ಲಿ ಜಯ ಗಳಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಪ್ರೊ ಕಬಡ್ಡಿ ಲೀಗ್ನ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.
ತೆಲುಗು ಟೈಟಾನ್ಸ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 29-10 ಅಂಕಗಳ ಅಂತರದಲ್ಲಿ ಬೃಹತ್ ಮುನ್ನಡೆ ಕಂಡಿತು. ಅರ್ಜುನ್ ದೇಶ್ವಾಲ್ ಹಾಗೂ ರಾಹುಲ್ ಚೌಧರಿ ರೈಡಿಂಗ್ನಲ್ಲಿ ತಲಾ 7 ಅಂಕಗಳನ್ನು ಗಳಿಸಿ ಬೃಹತ್ ಮುನ್ನಡೆಗೆ ನೆರವಾದರು. ಟ್ಯಾಕಲ್ನಲ್ಲಿ ಸಾಹುಲ್ ಕುಮಾರ್ 4 ಅಂಕಗಳನ್ನು ಗಳಿಸಿದರು. ತೆಲುಗು ಟೈಟಾನ್ಸ್ ಪರ ಮೊನು ಗೋಯತ್ ರೈಡಿಂಗ್ನಲ್ಲಿ 4 ಅಂಕಗಳನ್ನು ಗಳಿಸಿದರು. ಜೈಪುರ ಪಿಂಕ್ ಪ್ಯಾಂಥರ್ಸ್ ಒಟ್ಟು 17 ರೈಡಿಂಗ್ ಅಂಕ ಹಾಗೂ 7 ಟ್ಯಾಕಲ್ ಅಂಕಗಳನ್ನು ಗಳಿಸಿ ಪ್ರಭುತ್ವ ಸಾಧಿಸಿತು. ಎದುರಾಳಿ ತಂಡವನ್ನು ಎರಡು ಬಾರಿ ಆಲೌಟ್ ಮಾಡುವ ಮೂಲಕ ಜಯಕ್ಕೆ ಅಗತ್ಯವಿರುವ ವೇದಿಕೆಯನ್ನು ಪ್ರಥಮಾರ್ಧದಲ್ಲೇ ನಿರ್ಮಿಸಿಕೊಂಡಿತು.
ಆರಂಭದಿಂದಲೂ ಪಂದ್ಯದ ಮೇಲಡೆ ಹಿಡಿತ ಸಾಧಿಸಿದ್ದ ಜೈಪುರ ತಂಡದ ಪರ ಅರ್ಜುನ್ ದೇಶ್ವಾಲ್ 12 ಅಂಕಗಳನ್ನು ಗಳಿಸಿ ತಂಡದ ಬೃಹತ್ ಜಯಕ್ಕೆ ನೆರವಾದರು. ರಾಹುಲ್ ಚೌಧರಿ ಕೂಡ 8 ಅಂಕಗಳನ್ನು ಗಳಿಸಿ ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಸಾಹುಲ್ ಹಾಗೂ ಅಂಕುಶ್ ಟ್ಯಾಕಲ್ನಲ್ಲಿ ಒಟ್ಟು 12 ಅಂಕಗಳನ್ನು ಗಳಿಸಿದ್ದು ತಂಡದ ಯಶಸ್ಸಿನ ಪ್ರಮುಖ ಹೈಲೈಟ್ಸ್ ಆಗಿತ್ತು. ಟೈಟಾನ್ಸ್ ಪರ ಆದರ್ಶ್ (9) ಹಾಗೂ ಮೊನು ಗೋಯತ್ (5) ರೈಡಿಂಗ್ನಲ್ಲಿ ಮಿಂಚಿದರೂ ಇತರರ ಆಟಗಾರರ ಬೆಂಬಲ ಇರಲಿಲ್ಲ.
Pro Kabaddi, Jaipur Pink Panthers, Telugu Titans