ಪ್ರೊ ಕಬಡ್ಡಿಯ 9ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಪ್ಲೇಆಫ್ ಪ್ರವೇಶಿಸಿದೆ. ಮೊದಲ ಎಲಿಮಿನೇಟರ್ನಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಎದುರಿಸಲಿದೆ. ಎರಡನೆ ಎಲಿಮಿನೇಟರ್ನಲ್ಲಿ ತಮಿಳ್ ತಲೈವಾಸ್ ಹಾಗೂ ಯುಪಿ ಯೋಧಾಸ್ ತಂಡಗಳು ಸೆಣಸಲಿವೆ.
ಗುರುವಾರ ಬೆಂಗಾಲ್ ವಾರಿಯರ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 46-46 ಅಂಕಗಳಿಂದ ಡೆಲ್ಲಿ ದಬಾಂಗ್ ಟೈ ಮಾಡಿಕೊಂಡಿತು.ಇದರೊಂದಿಗೆ ಪ್ಲೇ ಆಫ್ಗೆ 6ನೇ ತಂಡವಾಗಿ ಪ್ರವೇಶಿಸಿತು.
ಡೆಲ್ಲಿ ತಂಡ ಟೂರ್ನಿಯಲ್ಲಿ 22 ಪಂದ್ಯಗಳಿಂದ 63 ಅಂಕಗಳನ್ನು ಸಂಪಾದಿಸಿತು.
ಡೆಲ್ಲಿ ಪರ ನಾಯಕ ಮತ್ತು ರೈಡರ್ ನವೀನ್ ಕುಮಾರ್ 16 ಅಂಕ ತಂದುಕೊಟ್ಟರು. ಬೆಂಗಾಲ್ ತಂಡದ ಮಣಿಂದರ್ ಸಿಂಗ್ 18 ಅಂಕ ಪಡದರು.
ಪ್ಲೇಆಫ್ ರೇಸ್ನ ಕನಸಲ್ಲಿದ್ದ ಗುಜರಾತ್, ಹರ್ಯಾಣ, ಬೆಂಗಾಲ್ ತಂಡಗಳು ನಿರಾಸೆ ಅನುಭವಿಸಿದವು.ಜೈಪುರ ಹಾಗೂ ಪುಣೇರಿ ತಂಡಗಳು ಸೆಮಿಫೈನಲ್ ತಲುಪಿವೆ.