ಬೆಂಗಳೂರು ಬುಲ್ಸ್ ತಂಡ ಪ್ಲೇಆಫ್ಗೆ ಲಗ್ಗೆ ಹಾಕಿದೆ. 20 ಪಂದ್ಯಗಳಲ್ಲಿ 12 ಪಂದ್ಯಗಳನ್ನು ಗೆದ್ದು ಒಟ್ಟು ಒಟ್ಟು 68 ಅಂಕಗಳನ್ನ ಪಡೆದು ಪ್ಲೇ ಆಫ್ಗೆ ಎಂಟ್ರಿಕೊಟ್ಟಿದೆ. ಜೊತೆಗೆ ಪ್ಲೇಆಫ್ ತಲುಪಿದ ಮೂರನೆ ತಂಡವೆನಿಸಿದೆ.
ಬೆಂಗಳೂರು ಬುಲ್ಸ್ ಯುಪಿ ಯೋಧಾಸ್ ವಿರುದ್ಧ 38-35 ಅಂಕಗಳಿಂದ ರೋಚಕ ಗೆಲುವು ದಾಖಲಿಸಿದೆ.
ಹೈದ್ರಾಬಾದ್ನ ಗಾಚಿ ಬೌಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬುಲ್ಸ್ ಮೊದಲಾರ್ಧದಲ್ಲಿ 19-14 ಅಂಕಗಳಿಂದ ಮುನ್ನಡೆ ಪಡೆಯಿತು.
ಬುಲ್ಸ್ ಪರ ರೈಡರ್ಗಳಾದ `ಭರತ್ 8, ವಿಕಾಶ್ ಕಾಂಡೋಲಾ 6, ಡಿಫೆಂಡರ್ ಅಮಾನ್ 5 ಅಂಕ ಪಡೆದರು.
ಮತ್ತೊಂದು ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡ ಯೂ ಮುಂಬಾ ವಿರುದ್ಧ 38-36 ಅಂಕಗಳಿಂದ ಸೋಲಿಸಿತು.
ಯುಪಿ ಪರ ರೈಡರ್ಗಳಾದ ಪ್ರದೀಪ್ ನರ್ವಾಲ್ 10 ಅಂಕ, ರೋಹಿತ್ ತೋಮರ್ 5 ಅಂಕ, ಆಲ್ರೌಂಡರ್ ಗುರುದೀಪ್ 6 ಅಂಕ ಪಡೆದರು. ಗುಜರಾತ್ ಪರ ಪಾರ್ತಿಕ್ ದಾಹೀಯಾ 13 ವಿಕೆಟ ಪಡೆದರು. ಯೂ ಮುಂಬಾ ಪರ ಪ್ರಣಯ್ ರಾಣೆ 11 ಅಂಕ ತಂದುಕೊಟ್ಟರು.