ಡೆಲ್ಲಿ ಕ್ಯಾಪಿಟಲ್ಸ್ನ ಸ್ಟಾರ್ ಬ್ಯಾಟ್ಸ್ಮನ್ ಪೃಥ್ವಿ ಶಾ ಮಾವು ಕದ್ದು ತಿನ್ನುವುದನ್ನು ಕಲಿಯುತ್ತಿದ್ದಾರೆ. ಮೊದಲ ವಿಡಿಯೋದಲ್ಲಿ ಮಾವಿನ ಹಣ್ಣುಗಳನ್ನು ಕದ್ದು ತನ್ನ ಜೇಬಿನಲ್ಲಿ ತುಂಬಿಕೊಳ್ಳುವುದು. ಇನ್ನೊಂದು ವೀಡಿಯೋದಲ್ಲಿ ತನಗೆ ಮಾವಿನ ಹಣ್ಣನ್ನು ಕತ್ತರಿಸುವುದು ಮತ್ತು ತಿನ್ನುವುದು ತಿಳಿದಿಲ್ಲಾ ಎಂದು ಶಾ ಮುಗ್ಧವಾಗಿ ಹೇಳಿದ್ದಾರೆ. ಸಹ ಆಟಗಾರರು ಆಶ್ಚರ್ಯದಿಂದ ಪೃಥ್ವಿಗೆ ನೀವು ಮಾವಿನಹಣ್ಣು ತಿಂದಿಲ್ಲವೇ? ಕೇಳುತ್ತಾರೆ. ಈ ಪ್ರಶ್ನೆಗೆ ಉತ್ತರವಾಗಿ, ಅವರು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ನಾಚಿಕೆಯಿಂದ ನಗುತ್ತಾರೆ.
ಗುಜರಾತ್ ಮತ್ತು ಲಕ್ನೋ ವಿರುದ್ಧ ಸತತ ಎರಡು ಇನ್ನಿಂಗ್ಸ್ಗಳಲ್ಲಿ ಪೃಥ್ವಿ ಅಬ್ಬರಿಸಿದ್ದರು. ಇದಾದ ನಂತರ, ಮಾವಿನ ಹಣ್ಣಿನ ವಾಸನೆ ಮುಗಿಗೆ ಬಡೆಯುತ್ತಿದ್ದಂತೆ ಏನು ಮಾಡಬೇಕು ಎಂಬ ಯೋಚನೆ ಬರುತ್ತದೆ. ಈ ವಾಸನೆಯ ಬೆನ್ನು ಹತ್ತಿದ ಪೃಥ್ವಿ ಈಗ ಏನು ಮಾಡೋಣ ಎನ್ನುತ್ತಾರೆ. ಆಗ ಆಲ್ ರೌಂಡರ್ ಲಲಿತ್ ಯಾದವ್ ಅವರು ಮಾವಿನ ಹಣ್ಣುಗಳ ರಸವನ್ನು ಕುಡಿಯುವುದು ಮತ್ತು ತಿನ್ನೋಣ ಎನ್ನುತ್ತಾರೆ. ಆಗ ಹಣ್ಣುಗಳ ರಾಶಿಗಳತ್ತ ಪೃಥ್ವಿ ಕೈ ಹಾಕುತ್ತಾರೆ.
ಪೃಥ್ವಿ ಹಣ್ಣುಗಳನ್ನು ಬೇರೆಯವರಿಗೆ ನೀಡುವ ದೃಶ್ಯ ಸಹ ಕಂಡು ಬರುತ್ತದೆ. ಬಳಿಕ ಮಾವಿನ ಹಣ್ಣಿನ ರುಚಿ ನೋಡುತ್ತಾರೆ. ಇದನ್ನು ನೋಡಿದ ಸಹ ಆಟಗಾರ ಇಷ್ಟು ಬೇಗ ಹಣಗಳನ್ನು ತಿನ್ನುವುದನ್ನು ಕಲಿಯಬಹುದೇ ಎಂದು ಕಾಲೆಳೆಯುತ್ತಾರೆ. ಅಲ್ಲದೆ ಕೈ, ಬಾಯಿ ಕೊಳೆ ಮಾಡಿಕೊಳ್ಳದ ಹಾಗೆ ತಿನ್ನಬೇಕು ಎಂದು ತಿಳಿಸುತ್ತಾರೆ. ಆಗ ಪೃಥ್ವಿ ನೀವು ತಿನ್ನಿ ಎಂದು ಮಾವುಗಳನ್ನು ನೀಡಲು ಮುಂದಾಗುತ್ತಾರೆ. ಇದನ್ನು ನೋಡಿ ಎಲ್ಲರೂ ನಗಲು ಪ್ರಾರಂಭಿಸುತ್ತಾರೆ.
ಪೃಥ್ವಿ ಈ ಋತುವಿನಲ್ಲಿ 40ರ ಸರಾಸರಿಯಲ್ಲಿ ಮತ್ತು 170 ಸ್ಟ್ರೈಕ್ ರೇಟ್ನಲ್ಲಿ 160 ರನ್ ಗಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ಗೆ ಪ್ರವೇಶಿಸಬೇಕಾದಲ್ಲಿ ಪೃಥ್ವಿ ಪಾತ್ರ ನಿರ್ಣಾಯಕವಾಗಿರುತ್ತದೆ.