Premier League: ಎರ್ಲಿಂಗ್ ಹಾಲೆಂಡ್ ಹ್ಯಾಟ್ರಿಕ್- ಮ್ಯಾಂಚೆಸ್ಟರ್ ಸಿಟಿ ಗೆ ಜಯ
ಎರ್ಲಿಂಗ್ ಹಾಲೆಂಡ್ ಸಿಡಿಸಿದ ಹ್ಯಾಟ್ರಿಕ್ ಗೋಲುಗಳ ಸಹಾಯದಿಂದ Premier League ಫುಟ್ಬಾಲ್ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಸಿಟಿ ವಿರುದ್ಧ ಕ್ರಿಸ್ಟಲ್ ಪ್ಯಾಲೇಸ್ ಭರ್ಜರಿ ಗೆಲುವು ದಾಖಲಿಸಿತು.

ಆರಂಭದಿಂದಲೂ ಜಿದ್ದಿಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಮ್ಯಾಂಚೆಸ್ಟರ್ ಸಿಟಿ ಮೊದಲು ಸಿಕ್ಕ ಅವಕಾಶವನ್ನು ಕೈ ಚೆಲ್ಲಿತು. ಮೊದಲಾವಧಿಯಲ್ಲಿ ಕ್ರಿಸ್ಟಲ್ ಪ್ಯಾಲೇಸ್ ತಂಡ ಸಮಯೋಚಿತ ಆಟವನ್ನು ಆಡಿ ಗಮನ ಸೆಳೆಯಿತು. ಈ ಅವಧಿಯ ನಾಲ್ಕನೇ ನಿಮಿಷದಲ್ಲಿ ಕ್ರಿಸ್ಟಲ್ ಪ್ಯಾಲೇಸ್ ತಂಡಕ್ಕೆ ಫ್ರಿ ಕಿಕ್ ಅವಕಾಶ ಲಭಿಸಿತು. ಈ ಅವಕಾಶದಲ್ಲಿ ಉಡುಗೊರೆ ಗೋಲು ದಾಖಲಿಸಿತು.

21ನೇ ನಿಮಿಷದಲ್ಲಿ ಕ್ರಿಸ್ಟಲ್ ಪ್ಯಾಲೇಸ್ ಜೋಕಿಮ್ ಆಂಡರ್ಸನ್ ಹೆಡರ್ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಯ ಒಳಗೆ ತಳ್ಳುವಲ್ಲಿ ಸಫಲರಾದರು. ಪರಿಣಾಮ ಕ್ರಿಸ್ಟಲ್ ಪ್ಯಾಲೇಸ್ 2-0 ಯಿಂದ ಮುನ್ನಡೆ ಸಾಧಿಸಿತು. ಮೊದಲಾವಧಿಯಲ್ಲಿ ಗೋಲು ಬಾರಿಸುವ ಮ್ಯಾಂಚೆಸ್ಟರ್ ತಂಡದ ಆಸೆ ಫಲಿಸಲಿಲ್ಲ.

ಎರಡನೇ ಅವಧಿಯ ಆರಂಭದಲ್ಲಿ ಬರ್ನಾರ್ಡೊ ಸಿಲ್ವಾ ಸಹ ಆಟಗಾರ ನೀಡಿದ ಉತ್ತಮ ಪಾಸ್ ನ ಲಾಭ ಪಡೆದು ಗೋಲು ಸಿಡಿಸಿದರು.
ಇದಾದ ಮೇಲೆ ನಡೆದಿದ್ದೇ ಎರ್ಲಿಂಗ್ ಹಾಲೆಂಡ್ ಮ್ಯಾಜಿಕ್ ಅಮೋಘ ಕಾಲ್ಚಳಕದ ಪ್ರದರ್ಶನ ನೀಡಿದ ಇವರು ಕೇವಲ 18 ನಿಮಿಷಗಳ ಅಂತರದಲ್ಲಿ ಪಟಪಟನೇ ಮೂರು ಗೋಲು ಬಾರಿಸಿದರು.

63ನೇ ನಿಮಿಷದಲ್ಲಿ ಎರ್ಲಿಂಗ್ ಹಾಲೆಂಡ್ ಹೆಡರ್ ಮೂಲಕ ಗೋಲು ಸಿಡಿಸಿದರೆ, 70 ಹಾಗೂ 81ನೇ ನಿಮಿಷದಲ್ಲಿ ಸಹ ಆಟಗಾರರು ನೀಡಿದ ಪಾಸ್ ನ ಲಾಭ ಪಡೆದು ಎದುರಾಳಿ ಗೋಲಿಯನ್ನು ವಂಚಿಸಿದರು. ಪರಿಣಾಮ ಮ್ಯಾಂಚಸ್ಟರ್ ಸಿಟಿ ತಂಡದ ಕೈ ಮೇಲಾಯಿತು.