ಫುಟ್ಬಾಲ್ ದಂತಕತೆ , ಸಾರ್ವಕಾಲಿಕಾ ಶ್ರೇಷ್ಠ ಆಟಗಾರ ಬ್ರೆಜಿಲ್ಗೆ 3 ವಿಶ್ವಕಪ್ ಗೆದ್ದುಕೊಟ್ಟ ಪೀಲೆ(82 ವರ್ಷ) ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.
ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅವರು 2021ರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಬೇರೆ ಕಾಯಿಲೆಗಿಂದ ಬಳಲುತ್ತಿದ್ದರಿಂದ ನ.29ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂತ್ರಪಿಂಡ ಮತ್ತು ಪ್ರಾಸ್ಪೇಟ್ ಸಮಸ್ಯೆಯಿಂದ ಬಳಲುತ್ತಿದ್ದರು.
ಇತ್ತಿಚೆಗೆ ಕ್ರಿಸ್ಮಸ್ ಹಬ್ಬದ ಸಂರ್ಭದಲ್ಲಿ ಪೀಲೆ ಅವರನ್ನು ನೋಡಲು ಕುಟುಂಬ ಸದಸ್ಯರು ಆಸ್ಪತ್ರೆಗೆ ಬಂದಿದ್ದರು.
ಪೀಲೆ 1958, 1962 ಹಾಗೂ 1972ರಲ್ಲಿ ಬ್ರೆಜಿಲ್ಗೆ ವಿಶ್ವಕಪ್ ಗೆದ್ದುಕೊಟ್ಟಿದ್ದರು. 3 ವಿಶ್ವಕಪ್ ಗೆದ್ದ ಏಕೈಕ ಆಟಗಾರರಾಗಿದ್ದಾರೆ.
1958ರಲ್ಲಿ ನಡೆದ ಸ್ವೀಡನ್ ನಲ್ಲಿ ನಡೆದ ವಿಶ್ವಕಪ್ ನಲ್ಲಿ ಆಡುವಾಗ ಅವರ ವಯಸ್ಸು 17. ಆ ವಿಶ್ವಕಪ್ನಲ್ಲಿ ಗೋಲು ಹೊಡೆದು ಗಮನ ಸೆಳೆದಿದ್ದರು.
92 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿ 77 ಗೋಲುಗಳನ್ನು ಹೊಡೆದಿದ್ದಾರೆ. ವಿವಿಧ ಕ್ಲಬ್ ಸೇರಿ 840 ಪಂದ್ಯಗಳಿಂದ 775 ಗೋಲು ಹೊಡೆದಿದ್ದಾರೆ. 1997ರಲ್ಲಿ ಪೀಲೆ ಬ್ರಿಟನ್ ರಾಣಿಯಿಂದ ಪ್ರತಿಷ್ಠಿತ ನೈಟ್ ಪ್ರಶಸ್ತಿ ಪಡೆದಿದ್ದಾರೆ.
ಪೀಲೆ ಈವರೆಗೆ 650 ಲೀಗ್ ಆಡಿದ್ದಾರೆ. 1,281 ಪಂದ್ಯಗಳನ್ನು ಆಡಿ ಫುಟ್ಬಾಲನಲ್ಲಿ ಕಿಂಗ್ ಎಂದು ಕರೆಸಿಕೊಂಡಿದ್ದಾರೆ.