ಪ್ಲೇ ಆಫ್ ರೇಸ್ನಲ್ಲಿದ್ದ ಪಂಜಾಬ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 15 ರನ್ ಗಳಿಂದ ಸೋತು ಟೂರ್ನಿಯಿಂದ ಬಹುತೇಕ ಹೊರ ಬಿದ್ದಿದೆ.
ಪ್ಲೇಆಫ್ಗೇರಬೇಕಿದ್ದಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಪಂಜಾಬ್ ಪವಾಡ ಮಾಡಿ ಗೆಲ್ಲಬೇಕಿದೆ.
ಧರ್ಮಾಶಾಲಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 213 ರನ್ ಕಲೆ ಹಾಕಿತು. ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 198 ರನ್ ಕಲೆ ಹಾಕಿತು.
ಪಂಜಾಬ್ ಹೇಳಿಕೊಳ್ಳುವಂತಹ ಆರಂಭ ನೀಡಲಿಲ್ಲ.
ಅಥರ್ವ ತೈಡೆ 55, ಲಿಯಾಮ್ ಲಿವಿಂಗ್ ಸ್ಟೋನ್ 94 ರನ್ ಹೊಡೆದು ಕೊನೆಯ ಓವರ್ ವರೆಗೂ ಪಂದ್ಯದ ಗೆಲುವನ್ನು ಜೀವಂತವಾಗಿರಿಸಿದ್ದರು.ಕೊನೆಯ ಓವರ್ನಲ್ಲಿ ಗೆಲ್ಲಲು 33 ರನ್ ಬೇಕಿದ್ದಾಗ ಲಿವಿಂಗ್ ಸ್ಟೋನ್ 2ನೇ ಮತ್ತು 4ನೇ ಎಸೆತವನ್ನು ಸಿಕ್ಸರ್ ಹೊಡೆದರು. 3ನೇ ಎಸೆತವನ್ನು ಬೌಂಡರಿಗೆ ಹೊಡೆದರು. 3 ಎಸೆತಲ್ಲಿ 16 ರನ್ ಬೇಕಿದ್ದಾಗ ವೇಗಿ ಇಶಾಂತ್ ಶರ್ಮಾ ಒಂದೂ ರನ್ ನೀಡದೇ ತಂಡವನ್ನು ಗೆಲ್ಲಿಸಿಕೊಟ್ಟರು.
ಇದಕ್ಕೂ ಮುನ್ನ ಡೆಲ್ಲಿ ಡೇವಿಡ್ ವಾರ್ನರ್ 46,ಪೃಥ್ವಿ ಶಾ 54, ರೀಲಿ ರೂಸೌ ಅಜೇಯ 82 ರನ್, ಸಾಲ್ಟ್ ಅಜೇಯ 26 ರನ್ ಹೊಡೆದರು.